Ad imageAd image

ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ

Hubballi Dhwani
ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ
WhatsApp Group Join Now
Telegram Group Join Now

ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ

ದೇಶದಲ್ಲಿ ಸುಮಾರು 127 ವರ್ಷಗಳಷ್ಟು ಇತಿಹಾಸ ಹೊಂದಿರುವ ಗೊದ್ರೇಜ್‌ ಕಂಪನಿಯ ಆಸ್ತಿಯು ಎರಡು ಕುಟುಂಬಗಳ ನಡುವೆ ಸರ್ವಸಮ್ಮತ ಒಪ್ಪಿಗೆ ಮೇರೆಗೆ ಹಂಚಿಕೆಯಾಗಿದೆ.

ಆದಿ ಗೊದ್ರೇಜ್‌ ಮತ್ತು ಅವರ ಸಹೋದರ ನಾದಿರ್ ಕುಟುಂಬವು ಒಂದು ಪಾಲು ಪಡೆದರೆ, ಅವರ ಸೋದರ ಸಂಬಂಧಿಗಳಾದ ಜಮ್ಶಿದ್ ನೌರೋಜಿ ಗೊದ್ರೇಜ್‌ ಮತ್ತು ಸ್ಮಿತಾ ಕೃಷ್ಣ ಗೊದ್ರೇಜ್‌ ಕುಟುಂಬವು ಮತ್ತೊಂದು ಪಾಲು ಪಡೆದಿದೆ.

ಇನ್ನು ಮುಂದೆ ಗೊದ್ರೇಜ್‌ ಇಂಡಸ್ಟ್ರೀಸ್‌ ಮತ್ತು ಗೊದ್ರೇಜ್‌ ಎಂಟರ್‌ಪ್ರೈಸಸ್‌ ಎಂಬ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ಷೇರುಪೇಟೆಗೆ ತಿಳಿಸಲಾಗಿದೆ.

ಎರಡೂ ಕುಟುಂಬಗಳು ಗೊದ್ರೇಜ್‌ ಬ್ರ್ಯಾಂಡ್ ಹೆಸರು ಬಳಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿವೆ. ಈ ಸಂಬಂಧ ಆರು ವರ್ಷದವರೆಗೆ ಸ್ಪರ್ಧಾತ್ಮಕವಲ್ಲದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಅವಧಿಯಲ್ಲಿ ಒಬ್ಬರ ವ್ಯಾಪಾರದ ವ್ಯಾಪ್ತಿಗೆ ಮತ್ತೊಬ್ಬರ ಪ್ರವೇಶಿಸುವಂತಿಲ್ಲ. ಅವಧಿ ಮುಗಿದ ಬಳಿಕ ಪ್ರವೇಶಿಸಬಹುದಾಗಿದೆ. ಆದರೆ, ಅದಕ್ಕೆ ಗೊದ್ರೇಜ್‌ ಹೆಸರನ್ನು ಬಳಸುವಂತಿಲ್ಲ ಎಂಬ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಶಿದ್ ಮತ್ತು ಅವರ ಸಹೋದರಿ ಸ್ಮಿತಾ ಅವರ ಸುಪರ್ದಿಗೆ ಗೊದ್ರೇಜ್‌ ಆ್ಯಂಡ್‌ ಬಾಯ್ಸ್ ಕಂಪನಿ ಹಾಗೂ ಮುಂಬೈನಲ್ಲಿರುವ 3 ಸಾವಿರ ಎಕರೆ ಜಮೀನು ಸೇರಲಿದೆ ಎಂದು ತಿಳಿಸಿವೆ.

WhatsApp Group Join Now
Telegram Group Join Now
Share This Article
error: Content is protected !!