ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ
ಕಲಘಟಗಿ: ತಾಲೂಕಿನ ತಾವರಗೇರಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಗೋಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಜಿಧ್ಯಕ್ಷ ಗುರುನಾಥ ಗೌಡ್ರ , ತಾಲೂಕು ಘಟಕ ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಪ್ರಾಂತ ಕೋಶಾಧಕ್ಷ ರಮೇಶ್ ಕೂರ್ವಿ, ರಾಜ್ಯ ಪ್ರಚಾರ ಸಂಚಾಲಕ ಪೂಪಾಲ ದಿವಟೆ, ರುದ್ರಗೌಡ ಪಾಟೀಲ, ಗ್ರಾಮದ ಹಿರಿಯರಾದ ಕೆ.ಎ-. ಪುಟ್ಟಪ್ಪನವರ, ವಕೀಲರಾದ ಕೆ.ಬಿ.ಗುಡಿಹಾಳ, ಗ್ರಾಮ ಘಟಕ ಅಧ್ಯಕ್ಷ ಸಿದ್ದಪ್ಪ ಹೂನ್ನಿಹಳ್ಳಿ, ತಾಲೂಕು ಪ್ರದಾನ ಕಾರ್ಯದರ್ಶಿ ಶರಣಪ್ಪ ಮಡಿವಾಳರ, ಕಾಯಕ ಯೋಗಿ ನಿಂಗಪ್ಪ, ಮುತ್ತಿಗಿ, ಸುಭಾಸ
ಧರಗುಂಟಿ, ನೀಲಪ್ಪ ಹಡಪದ, ಶೇಕಪ್ಪ ದ್ಯಾವಪ್ಪ ನವರ ಹಾಗೂ ತಾವರಗೇರಿ ಯಲವದಾಳ ಗುರು, ಹಿರಿಯರು ಪಾಲ್ಗೊಂಡಿದ್ದರು.