ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಬುಧವಾರ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಕ್ಕೆ ಸಿಡಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದು ಪ್ರತಿಭಟನಾಕಾರರು ಕಿಡಿಕಾರಿದ್ದಲ್ಲದೇ, ಶಿವಕುಮಾರ್ ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯ ಮಾಡಿ ಘೋಷಣೆ ಕೂಗಿದರು.
ಹು-ಧಾ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ ಮತ್ತು ಬಿ.ಬಿ. ಗಂಗಾಧರಮಠ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ನವೀನಕುಮಾರ, ಬಾಬಾಸಾಹೇಬ್ ಮುದಗಲ್, ಮಾರುತಿ ಹಿಂಡಸಗೇರಿ,ವಿನಾಯಕ ಗಾಡಿವಡ್ಡರ, ಪೂರ್ಣಿಮಾ ಸವದತ್ತಿ,ಪೂಜಾ ಮೆಣಸಿನಕಾಯಿ,ಗೀತಾ ಸುನಿತಾ, ಮಹಾದೇವಿ ಪಾಟೀಲ,ಶಂಕರಗೌಡ ದೊಡ್ಡಮನಿ, ಬೀಮರಾಯ ಗುಡೆನಕಟ್ಟಿ, ಬಸವರಾಜ ದನಿಗೊಂಡ, ಪ್ರಭು ಚೌಟಾ ಇದ್ದರು.