Ad imageAd image

ಟಾಪ್ ವಿವಿಗಳ ಪಟ್ಟಿಯಲ್ಲಿ ಕವಿವಿ

Hubballi Dhwani
ಟಾಪ್ ವಿವಿಗಳ ಪಟ್ಟಿಯಲ್ಲಿ ಕವಿವಿ
WhatsApp Group Join Now
Telegram Group Join Now

ಟಾಪ್ ವಿವಿಗಳ ಪಟ್ಟಿಯಲ್ಲಿ ಕವಿವಿ

ಧಾರವಾಡ: ಲಂಡನ್ ಮೂಲದ ದಿ ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝೀನ್‌ ಪ್ರಸಕ್ತ ಸಾಲಿಗೆ (2024) ಏಷಿಯಾದ ವಿದ್ಯಾಲಯಗಳ ಟಾಪ್ ವಿಶ ಪಟ್ಟಿಬಿಡುಗಡೆ ಮಾಡಿದ್ದು, ರಾಜ್ಯದ 19 ಸರ್ಕಾರಿ ವಿವಿಗಳಲ್ಲಿ ಕವಿವಿ ಮೊದಲ ಸ್ಥಾನ ಪಡೆದಿದೆ ಎಂದು ಪ್ರೊ. ಕೆ.ಬಿ. ಗುಡಸಿ ತಿಳಿಸಿದರು. ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಏಷಿಯಾದ ಒಟ್ಟು 31 ರಾಷ್ಟ್ರಗಳ ವಿಶ್ವ ವಿದ್ಯಾಲಯಗಳ ಬೊಧನೆ, ಸಂಶೋಧನೆ ಪರಿಸರ ಮತ್ತು ಗುಣಮಟ್ಟ, ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನ ಸೇರಿ ಒಟ್ಟು ಪ್ರಮುಖ ಐದು ವಿಷಯ ಮಾಪನ ಒಳಗೊಂಡ 18 ಸೂಚ್ಯಂಕಗಳ ಮಾನದಂಡಗಳಲ್ಲಿ ಜಾಗತಿಕ ವಿಶ್ವ ವಿದ್ಯಾಲಯಗಳ 3.0 ಸಂಶೋಧನಾ ಪದ್ಧತಿಯಲ್ಲಿ ಸಂಸ್ಥೆಗಳನ್ನು ಸರ್ವೆ ಮಾಡಲಾಗಿದೆ ಎಂದರು. ಕರ್ನಾಟಕದ ಮೈಸೂರು ವಿವಿ ಸೇರಿ ಇತರ ಅನೇಕ ಖಾಸಗಿ ವಿವಿಗಳನ್ನು ಹಿಂದಿಕ್ಕಿರುವ ಕವಿವಿ ಉತ್ತಮ ಬ್ಯಾಂಕಿಂಗ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಪ್ರೊ. ಕೆ.ಬಿ. ಗುಡಸಿ ಸಂತಸ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!