ಜಿಪಿಎಸ್, ಲೊಕೇಷನ್ ಡಿವೈಸ್ಗಳೂ ಅಳವಡಿಕೆ ಕಲಬೆರಕೆ ತಡೆಗಾಗಿ ಭಾರಿ ಮುಂಜಾಗ್ರತಾ ಕ್ರಮ
ತಿರುಪತಿ ತಿರುಮಲ ದೇಗುಲದ ಲಡ್ಡು ಪ್ರಸಾದಕ್ಕೆ ತಮಿಳುನಾಡಿನ ಖಾಸಗಿ ಡೈರಿಯಿಂದ ಕಲ ಬೆರಕೆಯ ತುಪ್ಪಪೂರೈಕೆಯಾದ ವಿಚಾರ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗು ತ್ತಿದ್ದಂತೆ ಇದೀಗ ತುಪ್ಪ ಪೂರೈಕೆಯ ಟೆಂಡರ್ ಪಡೆದಿರುವ ಕೆಎಂಎಫ್ ಸಾಕಷ್ಟು ಮುಂಜಾ ಗ್ರತಾ ಕ್ರಮ ವಹಿಸಿದೆ.
ತುಪ್ಪ ಪೂರೈಸುವ ಲಾರಿಗ ಳಿಗೆ ಜಿಪಿಎಸ್ ಮತ್ತು ಡಿಜಿಟಲ್ ಲಾಕ್ ಅಳವಡಿಸುವ ಮೂಲಕ ಎಲ್ಲೂತಿರುಪತಿಗೆ ಪೂರೈಕೆಯಾ ಗುವ ನಂದಿನಿ ತುಪ್ಪ ಕಲ ಬೆರಕೆಯಾಗದಂತೆ ಡಿಜಿಟಲ್ ಕಣ್ಣಾವಲು ಇಟ್ಟಿದೆ.
ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಡ್ಡುಪ್ರಸಾದಕ್ಕೆ ತಮಿಳುನಾಡಿನ ಖಾಸಗಿ ಸಂಸ್ಥೆ ಪೂರೈಸುತ್ತಿದ್ದ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು(ದನ, ಹಂದಿ ಕೊಬ್ಬು) ಪತ್ತೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಆಕ್ರೋಶವ್ಯಕ್ತವಾಗುತ್ತಿದೆ. ಹೀಗಾಗಿ ಹಿಂದೂಗಳ ಶ್ರದ್ಧಾಕೇಂದ್ರವಾದ ತಿರುಪತಿಗೆ ತುಪ್ಪ ಪೂರೈಸುವ ಟೆಂಡರ್ ಅನ್ನು ಗುಣಮಟ್ಟಕ್ಕೆ ಹೆಸರಾದ ಕರ್ನಾಟಕದ ಕೆಎಂಎಫ್ ಸಂಸ್ಥೆ ನೀಡಲಾಗಿದೆ.
ತಿರುಪತಿಯ ಲಡ್ಡು ಪ್ರಸಾದಕ್ಕಾಗಿ ಸದ್ಯ 350 ಮೆಟ್ರಿಕ್ ಟನ್ ತುಪ್ಪ ಪೂರೈಸುವ ಟೆಂಡರ್ ಕೆಎಂಎಫ್ಗೆ ದೊರೆತಿದೆ. ಅದರಂತೆ ಕೆಎಂಎಫ್ 15 ದಿನಗಳಿಂದ ಕರ್ನಾಟಕದಿಂದ ತುಪ್ಪ ಪೂರೈಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಿ, ತಿರುಪತಿಗೆ ತುಪ್ಪ ಪೂರೈಸುತ್ತಿದ್ದೇವೆ. ತುಪ್ಪ ಪೂರೈಕೆ ವೇಳೆ ಎಲ್ಲೂ ಕಲಬೆರಕೆ ಆಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ತುಪ್ಪ ಪೂರೈಸುವ ಲಾರಿಗಳಿಗೆ ಜಿಪಿಎಸ್, ಡಿಜಿಟಲ್ ಲಾಕರ್ಅಳವಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಭಾನುವಾರ ತಿಳಿಸಿದ್ದಾರೆ.