ಬೆಚ್ಚಗಿನ ಶುಂಠಿ ಚಹಾವನ್ನು ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ ಆದಾಗ್ಯೂ, ಹೆಚ್ಚು ಶುಂಠಿ ಚಹಾವನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂಶೋಧನೆ ತೋರಿಸುತ್ತದೆ.
ಶುಂಠಿ ಸೇವನೆ ಹೆಚ್ಚುವುದರಿಂದ ದೇಹದ ಉಷ್ಣತೆಯೂ ಹೆಚ್ಚುತ್ತದೆ. ಇದರಿಂದ ಬಾಯಿಯಲ್ಲಿ ಬೊಕ್ಕೆ, ಮುಖದಲ್ಲಿ ಮೊಡವೆಯಂಥ ಸಮಸ್ಯೆಗಳು ಕಾಣಿಸಿಕೊಂಡಾವು. ಇನ್ನು ಕೆಲವರಿಗೆ ದೇಹದ ಉಷ್ಣತೆ ಹೆಚ್ಚಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕಡಿಮೆ ರಕ್ತದೊತ್ತಡ ಹೊಂದಿರುವ ಜನರು ಶುಂಠಿ ಚಹಾವನ್ನು ತ್ಯಜಿಸಬೇಕು. ಇದನ್ನು ಅತಿಯಾಗಿ ಸೇವಿಸಿದಾಗ ತಲೆತಿರುಗುವಿಕೆ ಮಾತ್ರವಲ್ಲದೆ ರಕ್ತದೊತ್ತಡ ಮತ್ತು ಇತರ ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು.