ಮಹೇಶ ಟೆಂಗಿನಕಾಯಿ ಜನ್ಮದಿನ ಆಚರಣೆ
ಹುಬ್ಬಳ್ಳಿ: ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಶಾಸಕರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಇದೇ ಸಂದರ್ಭದಲ್ಲಿ ಬಿಜೆಪಿ ಸೆಂಟ್ರಲ್ ಕ್ಷೇತ್ರದ ವತಿಯಿಂದ ಶುಭಾಶಯ ಕೋರಲಾಯಿತು.
ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ್ ಚವಾಣ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಹಿರಿಯರಾದ ದತ್ತಮೂರ್ತಿ ಕುಲಕರ್ಣಿ,ಬಿಜೆಪಿ ಯುವ ಮುಖಂಡ ವಿಎಕೆ ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ, ರವಿ ನಾಯಕ, ದೀಪಕ ಮೆಹರವಾಡೆ, ವಿಶ್ವನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.