Ad imageAd image

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ಸಾಧಕರಿಗೆ ಸನ್ಮಾನ

Hubballi Dhwani
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ಸಾಧಕರಿಗೆ ಸನ್ಮಾನ
WhatsApp Group Join Now
Telegram Group Join Now

ಹುಬ್ಬಳ್ಳಿ ; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಪ್ರತಿ ವರ್ಷ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಅದರಲ್ಲೂ ಸಾಧಕರನ್ನು ಹುಡುಕಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಬಣ್ಣಿಸಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು ಪ್ರತಿ ಕ್ಷೇತ್ರದಲ್ಲಿಯೂ ಸಾಧಕರಿದ್ದಾರೆ ಅವರನ್ನು ಹುಡುಕಿ ಪ್ರೋತ್ಸಾಹಿಸುತ್ತಿರುವುದರಿಂದ ಭವ್ಯ ಸಮಾಜ ನಿರ್ಮಾಣವಾಗಲಿದೆ ಅಲ್ಲದೇ ಪ್ರೋತ್ಸಾಹ ಸಿಕ್ಕಂತೆಯು ಆಗಲಿದೆ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಂಗಮ ಸಾಧ್ಯವಾಗುವಾದರೊಂದಿಗೆ ಭಾರತವು ಸಾಂಸ್ಕೃತಿಕ ಭವ್ಯ ನಾಡು ಇಲ್ಲಿ ಅದ್ಭುತವಾದ ಶಕ್ತಿಗಳು ಹೊಂದಿದೆ ಯೋಗದೊಂದಿಗೆ ಸಂಗೀತ ಕೇಳುವುದು ಮಸ್ತಕ, ಮನಸ್ಸು, ಆರೋಗ್ಯಕ್ಕೆ ಹೆಚ್ಚಿನ ಒಂದು ಶಕ್ತಿ, ಆನಂದ ಇಮ್ಮಡಿಗೊಳ್ಳುತ್ತದೆ ಭರತನಾಟ್ಯವು ಸುಂದರ ಲೋಕದತ್ತ ಕೊಂಡೊಯ್ಯುವ ದಿವ್ಯ ಶಕ್ತಿಯಾಗಿದೆ. ಯೋಗ, ನೃತ್ಯ, ಸಂಗೀತ, ನೋಡಿ ಆನoದಿಸುವದರೊಂದಿಗೆ ಅದರಲ್ಲಿ ತೊಡಗಿಸಿಕೊಳ್ಳುವುದು ಇಂದಿನ ವಾತಾವರಣಕ್ಕೆ ಅತೀ ಅವಶ್ಯವಾಗಿದೆ ಎಂದು ನುಡಿದರು.

ಮಹಾ ಮಂಡಳದ ಅಧ್ಯಕ್ಷರಾದ ಮೋಹನ ಲಿಂಬಿಕಾಯಿ ಪ್ರಾಸ್ತಾವಿಕ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಮೂರುಸಾವಿರಮಠ ಆಶ್ರಯ ನೀಡುತ್ತಿದೆ ಸ್ವಾಮೀಜಿಗಳು ಎಲ್ಲದಕ್ಕೂ ಸಹಕಾರ ನೀಡುತ್ತಿದ್ದಾರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದರಿಂದ ಸಾರ್ಥಕವೆನಿಸುತ್ತದೆ. ನಾಟ್ಯಾಂಜಲಿ ಕಲಾತಂಡದ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿದರು ಯೋಗ ಪ್ರವೀಣೆ ಪ್ರೀತಿ ಹಡಗಲಿ ಯೋಗ ಪ್ರದರ್ಶನ ನೀಡಿದರು ಮಣ್ಣಿನ ಕಲಾತ್ಮಕ ಗಣಪತಿ ಮೂರ್ತಿಗಳು ಹಾಗೂ ಕಲಾವಿದರು, ಸಮಾಜ ವೇದಿಕೆ ಅಲಂಕಾರ, ಸಮಾನ ವಿದ್ಯುತ್ ಅಲಂಕಾರ, ಪ್ರೋತ್ಸಾಹಕ, ಸಮಾನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿತ ಸಮಿತಿಗಳು ಬಹುಮಾನ ಪಡೆದವು. ನರರೋಗ ತಜ್ಞ ಡಾ|| ವಿಜಯಮಹಾಂತೇಶ ಪೂಜಾರ, ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ಡಾ|| ರಘು ಅಕಮಂಚಿ, ಭಾವೈಕ್ಯತೆ ಸೇವೆ ಕಾಂತೇಶ ಗಂಟೆಪ್ಪನವರ, ಸಂಸ್ಕೃತಿ ಮತ್ತು ಸಾಹಿತ್ಯ ಧರಣೇಂದ್ರ ಜವಳಿ, ಪ್ರಗತಿಪರ ರೈತ ದೇವಾನಸಾಬ್ ನದಾಫ, ಉದ್ಯಮಿ ವೆಂಕಟೇಶ ಕಾಟವೆ, ನಾವಿನ್ಯತಾ ರಾಷ್ಟ್ರೀಯ ಪುರಸ್ಕಾರ ಪಡೆದ ಸುಧಾ ಹಾದಿಮನಿ (ಶೀಲವಂತರ) ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿಗಳಾದ ಶಿವಯೋಗಿ ಗಡ್ಡದೇವರಮಠ, ಶಂಕರ ಕೋಳಿವಾಡ, ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಪ್ರಮುಖರಾದ ಎಸ್.ಎಸ್. ಕಮಡೋಳ್ಳಿಶೆಟ್ಟರ್, ಗಾಯತ್ರಿ ನೆಲ್ಲಿಕೊಪ್ಪ, ಸವಿತಾ ಚಂದನಮಟ್ಟಿ, ಅನಿಲ ಕವಿಶೆಟ್ಟಿ, ಹರೀಶ ಭರಾಡೆ, ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ, ಅನಿತಾ ಜಡಿ, ಕಾರ್ಯಕ್ರಮ ನಿರೂಪಣೆ ಸಂಗೀತ ಕಾರ್ಯಕ್ರಮ ನೆರವೇರಿಸಿದರು.

ಬಹುಮಾನ ನಿರ್ಣಾಯಕರ ಸಮಿತಿ
ಈರಣ್ಣ ಪಾಳೇದ, ಅಶೋಕ ಬೆಲ್ಲಿಗಟ್ಟಿ, ಸಿದ್ದಪ್ಪ ಅಂಗಡಿ, ಡಾ|| ಚಿದಾನಂದ ತೆಗ್ಗೀಹಳ್ಳಿ, ಎಮ್. ಎಮ್. ಡಂಬಳ, C.G.ಧಾರವಾಡಶೆಟ್ಟರ್, ಜಯಕುಮಾರ ಮುರಗೋಡ, ವಿಶ್ವನಾಥ ಹಿತ್ತಾಳಿ, ಮಹೇಶ ಪತ್ತಾರ, ಅನಿಲ ಬೇವಿನಕಟ್ಟಿ, ಮೃತ್ಯುಂಜಯ ಕಮಡೋಳ್ಳಿಶೆಟ್ರು, ಶಾಂತಪ್ಪ ನವಲಗುಂದ, ಮೌನೇಶ ಅರ್ಕಸಾಲಿ, ಗುರುನಾಥ ಪತ್ತಾರ, ಮೃತ್ಯುಂಜಯ ಮಟ್ಟಿ, ಪ್ರಕಾಶ ಜಗಳೂರು, ಅಕ್ಕಮ್ಮ ಕಂಬಳಿ, ಸಾಧನಾ ಪೂಜಾರ, ರೂಪಾ ಅಂಗಡಿ, ಪುಷ್ಪಾ ಹಿತ್ತಾಳಿ, ಸರಸ್ವತಿ ಮೆಹರವಾಡೆ, ರೇಖಾ ಆಪ್ಟೆ, ಮಂಜುಳಾ ಹತ್ತಿಮತ್ತೂರ, ರತ್ನಾ ಬಸಾಪುರ, ಅಕ್ಕಮಹಾದೇವಿ ಅಂದೇಲಿಮಠ, ಪಾರ್ವತಿ ಹಿರೇಮಠ, ಶೋಭಾ ಕಂಪ್ಲಿ, ಸಂಗೀತಾ ದೇವದಾಸ, ಸಂಗೀತಾ ಜಡಿ, ರೋಹನ ಗೊಂದಕರ ಇವರನ್ನು ಪೂಜ್ಯರು ಗೌರವಿಸಿದರು.

WhatsApp Group Join Now
Telegram Group Join Now
Share This Article
error: Content is protected !!