ಜ.23ರಂದು ಮುಕ್ತಿ ವಾಹನ ಲೋಕಾರ್ಪಣೆ

Hubballi Dhwani
ಜ.23ರಂದು ಮುಕ್ತಿ ವಾಹನ ಲೋಕಾರ್ಪಣೆ
WhatsApp Group Join Now
Telegram Group Join Now

ಹುಬ್ಬಳ್ಳಿ; ಸಮಸ್ತ ಮರಾಠಾ ಸಮಾಜ ದಿಂದ ಜ.23 ರಂದು ಮುಕ್ತಿ ವಾಹನ ಲೋಕಾರ್ಪಣೆ ಮಾಡಲಾಗುವುದು ಎಂದು ಬಸ್ವಂತ್ ಶಿಂಧೆ ಹೇಳಿದರು‌.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ನಗರದ ಶಿವಾಜಿ ಚೌಕ್ನಲ್ಲಿರುವ ಸಮಸ್ತ ಮರಾಠಾ ಸಮಾಜ ಸೇವಾ ಸಂಘ ದಿಂದ ಮುಕ್ತಿ ವಾಹನದ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಮರಾಠಾ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಶಿಂಧೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ವಾಗ್ಮೊಡಡೆ ಮಾತನಾಡಿ, ಮರಾಠಾ ಸಮಾಜ ಸೇರಿದಂತೆ ವಿವಿಧ ಸಮಾಜಗಳೊಂದಿಗೆ ಬೆರೆತು ಆರೋಗ್ಯ ತಪಾಸಣಾ ಶಿಬಿರ. ಬ್ಲಡ್ ಕ್ಯಾಂಪ.ಕಣ್ಣು ತಪಾಸಣಾ ಶಿಬಿರ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸೇರಿದಂತೆ ಸಮಾಜ ಸೇವೆ ಮಾಡುತ್ತಾ ಬಂದಿದ್ದೇವೆ ಎಂದರು.
ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಇರುವಂತ ಮರಾಠಾ ಸಮಾಜದ ಬಾಂಧವರು ನಮ್ಮ ಸಂಸ್ಥೆಗೆ ಸದಸ್ಯರಾಗಿದ್ದಾರೆ ಎಂದರು.
ನಮ್ಮ ಕುಲಬಾಂಧವರು ಅಲ್ಲದೆ ಇತರೆ ಸಮಾಜದ ಜನರ ನಿರ್ದೇಶನದಂತೆ ಮುಕ್ತಿ ವಾಹನ ಅವಶ್ಯಕತೆ ಅರಿತು ಎಸ್ಎಂಎಸ್ ಸಂಘಟನೆಯಿಂದ ಟೆಂಪೋ ಟ್ರಾವೆಲರ್ ವಾಹನದ ನಂಬರ್ kA 25 D 3778 ಅನ್ನು ಖರೀದಿಸಿ ಶವ ಸಾಗಿಸಲು ಮುಕ್ತಿ ವಾಹನವನ್ನು ದಿನಾಂಕ 23 /01/2025 ಮುಂಜಾನೆ 11 ಗಂಟೆಗೆ ಮರಾಠಾ
ಗಲ್ಲಿಯ ಶಿವಾಜಿ ಚೌಕಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ತಂದೆ ಯಾದ ಶ್ರೀ ಶಹಾಜೀರಾಜೆ ಬೋಸ್ಲೆ ಅವರ 361ನೆಯ ಪುಣ್ಯ ತಿಥಿ. ಹಾಗೂ ಮುಕ್ತಿವಾಹನದ ಉದ್ಘಾಟನೆ ನಡೆಯಲಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ. ಶಾಸಕರಾದ ಶ್ರೀನಿವಾಸ್ ಮಾನೆ. ಅರವಿಂದ್ ಬೆಲ್ಲದ್. ಪ್ರಸಾದ ಅಬ್ಬಯ್ಯ. ಮಹೇಶ್
ಟೆoಗಿನಕಾಯಿ. ಮಹಾಪೌರರಾದ ರಾಮಣ್ಣ ಬಡಿಗೇರ್. ಮರಾಠಾ ಶ್ರೀ ಭಾರತಿಮಠ
ಟ್ರಸ್ಟ್ ಸಮಿತಿಯ ಅಧ್ಯಕ್ಷ ಸುನೀಲ್ ದಳವಿ. ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ. ಸಮಾಜದ ಮುಖಂಡರಾದ ಕೇಶವ್‌ ಯಾದವ್ . ವಿಶ್ವಾಸ ರಾವ್ ಜಾದವ್ ಸೇರಿದಂತೆ ಪ್ರಮುಖರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ದಯಾನಂದ್ ಚೌಹಾಣ ವೈಸಲಿದ್ದಾರೆ ಎಂದು ತಿಳಿಸಿದರು.
ಈ ಮುಕ್ತಿ ವಾಹನವನ್ನ ಯಾವುದೇ ಲಾಭಕ್ಕಾಗಿ ಮಾಡಿರುವುದಿಲ್ಲ
ಯಾವುದೇ ಧರ್ಮದ ಶವ ಸಂಸ್ಕಾರ ಮಾಡಲು ಬೇಕಾದಂತಹ ಸಾಮಗ್ರಿಗಳನ್ನು ಅತಿ ಕಡಿಮೆ ಬೆಲೆಯಲ್ಲಿ ನೀಡಲು ಸಮಿತಿ ನಿರ್ಧರಿಸಿದೆ. ಬರುವ ದಿನದಲ್ಲಿ
ಸಾರ್ವಜನಿಕರಿಗಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಲು ಈಗಾಗಲೇ ಸಿದ್ಧತೆ ನಡೆದಿದ್ದು ಹಿರಿಯ ಜೀವಿಗಳ ವಸತಿ ನಿಲಯ( old age home ) (ವೃದ್ದಾ ಶ್ರಮ ) ಪ್ರಾರಂಭಿಸಲು ನಮ್ಮ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಮುಕ್ತಿ ವಾಹನದ ಒಳಗಡೆ ಸಂಪೂರ್ಣ ಹವಾನಿಯಂತ್ರಿತ ಹಾಗೂ ರೋಗಿಗಳನ್ನ ಆಸ್ಪತ್ರೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸಲು ಆಕ್ಸಿಜನ್ ಸೌಲಭ್ಯ ಹೊಂದಿದೆ ಅತಿ ಕಡಿಮೆ ದರದಲ್ಲಿ ನಗರದಿಂದ ಐವತ್ತು ಕಿಲೋಮೀಟರ್ ಒಳಗಡೆ ರೋಗಿಗಳನ್ನ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮತ್ತೋರ್ವ ಉಪಾಧ್ಯಕ್ಷ ಸಂತೋಷ್ ಖೈರೆ
ಹೇಳಿದರು . ಈ ಮುಕ್ತಿ ವಾಹನದ ಸೌಲಭ್ಯವನ್ನು ನಗರದ ನಾಗರಿಕರು ಪಡೆದುಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಸಮಿತಿಯ ನಿರ್ದೇಶಕರಾದ ಶಿವಾಜಿ ಜಾದವ್.ರಾಮಚಂದ್ರ ಯಾದವ್ ಹಾಗೂ ಪ್ರಮುಖ ಉಪಸ್ಥಿತರಿದ್ದರು .

WhatsApp Group Join Now
Telegram Group Join Now
Share This Article
error: Content is protected !!