ಬಂದ್‌ಗೆ ನೀರಸ್ ಪ್ರತಿಕ್ರಿಯೆ
ಎಂದಿನಂತೆ ನಡೆದ ವ್ಯಾಪಾರ ವಹಿವಾಟು
ಹುಬ್ಬಳ್ಳಿ: ಎಂಇಎಸ್ ಹಾಗೂ ಶಿವಸೇನೆ ನಿಷೇಧಿಸಬೇಕು ಹಾಗೂ ಮಹದಾಯಿ-ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕನ್ನಡ ಸಂಘಟನೆಗ ಒಕ್ಕೂಟ ನೀಡಿದ ಬಂದ್ ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿಯಲ್ಲಿ ಜನ ಮತ್ತು ವಾಹನಗಳ ಓಡಾಟ ಕಂಡು ಬಂದಿತು. ಅಂಗಡಿ, ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಹೋಟೆಲ್ ಗಳು ತೆರೆದಿದ್ದವು. ಬಂದ್ ಬಿಸಿ ನಗರದಲ್ಲಿ ಯಾವುದೇ ರೀತಿ ತಟ್ಟಲಿಲ್ಲ. ಸಾರಿಗೆ ಬಸ, ಆಟೋ ಸೇರಿ ಖಾಸಗಿ ವಾಹನಗಳು ಓಡಾಡಿದವು. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್ ಗಳ ಸಂಚಾರ ಬಂದ್ ಆಗಿತ್ತು. ಇನ್ನುಳಿದಂತೆ ಬೆಳಗಾವಿ ನಗರ, ಜಿ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ.