ಮುಂದೆ ಮಹಿಳಾ ಸಿಎಂ; ಕೋಡಿಶ್ರೀ: ಹೆಬ್ಬಾಳ್ಳರ್ ಸಿಎಂ ಪೋಸ್ಟ್ ವೈರಲ್
ಬೆಳಗಾವಿ: ‘ರಾಜ್ಯದಲ್ಲಿ ಮಹಿಳೆಯೊಬ್ಬರು ಸಿಎಂ ಆಗುತ್ತಾರೆ’ ಎಂಬ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರ ಭವಿಷ್ಯದ ಬೆನ್ನಲ್ಲೇ ರಾಜ್ಯ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ‘ಲಕ್ಷ್ಮೀ ಹೆಬ್ಬಾಳ್ಳಾರ್ ಮೊದಲ ಮಹಿಳಾ ಸಿಎಂ ಆಗಲಿ’ ಎಂಬ ಅಭಿಯಾನ ಆರಂಭಿದ್ದಾರೆ. ರಾಜ್ಯದಲ್ಲಿ ಮಹಿಳಾ ಸಿಎಂ ಆಗುತ್ತಾರೆ ಎಂದು ಕೋಡಿ ಮಠದ ಶ್ರೀಗಳು ಇತ್ತೀಚೆಗೆ ಭವಿಷ್ಯ ನುಡಿದಿದ್ದರು. ಶ್ರೀಗಳ ಭವಿಷ್ಯ ಟ್ಯಾಗ್ ಮಾಡಿರುವ ಸಚಿವರ ಬೆಂಬಲಿಗರು, ‘ರಾಜ್ಯಕ್ಕೆ ಮಹಿಳಾ ಸಿಎಂ ನಮ್ಮ ಬೆಳಗಾವಿ ಚನ್ನಮ್ಮ, ಕೋಡಿಮಠ ಶ್ರೀ ಭವಿಷ್ಯ ನಿಜ ಆಗುತ್ತೋ?, ಸಿದ್ದರಾಮಯ್ಯನವರು ಅಧಿ ಕಾರದಿಂದ ಕೆಳಗಿಳಿದರೆ ಮುಂದಿನ ಸಿಎಂ ಆಗಿ ಬೆಳಗಾವಿಯ ಲಕ್ಷ್ಮೀ ಅಕ್ಕಾ’ ಎಂದು ಪೋಸ್ಟ್ ಹಾಕಿದ್ದು, ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದೆ.