ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ರಾಜ್ಯದ ಇಬ್ಬರು ಸ್ವಿಮ್ಮರ್ ಗಳು!
ಪ್ಯಾರಿಸ್ ಒಲಿಂಪಿಕ್ಸ್ ಗೆ ಕರ್ನಾಟಕದ ಸ್ವಿಮ್ಮರ್ಗಳಾದ ಶ್ರೀಹರಿ ನಟರಾಜನ್ ಹಾಗೂ ಧಿನಿಧಿ ದೇಸಿಂಘು ಆಯ್ಕೆಯಾಗಿದ್ದಾರೆ.
ಶ್ರೀಹರಿಗೆ ಇದು ಸತತ 2ನೇ ಒಲಿಂಪಿಕ್ಸ್ ಕ್ರೀಡಾಕೂಡವಾಗಿದೆ. 14 ವರ್ಷದ ಧಿನಿಧಿ ಇದೇ ಮೊದಲ ಒಲಿಂಪಿಕ್ಸ್ ಸ್ಪರ್ದೆಯಾಗಿದೆ. ಈ ಇಬ್ಬರಿಗೂ ಒಲಿಂಪಿಕ್ಸ್ ಅರ್ಹತೆ ಸಿಕ್ಕಿರುವ ವಿಚಾರವನ್ನು ಭಾರತೀಯ ಈಜು ಫೆಡರೇಶನ್ (ಎಸ್ ಎಫ್ಐ) ಬುಧವಾರ ಖಚಿತಪಡಿಸಿದೆ. ಯುನಿವರ್ಸಲಿಟಿ ಕೋಟಾದಲ್ಲಿ ಇವರಿಗೆ ಈ ಅರ್ಹತೆ ಲಭಿಸಿದೆ.
2021ರ ಟೋಕಿಯೊ ಒಲಿಂಪಿಕ್ಸ್ ಶ್ರೀಹರಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಮೊದಲ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದೀಗ ದ್ವಿತೀಯ ಪ್ರಯತ್ನದಲ್ಲಿ ಐತಿಹಾಸಿಕ ಪದಕವೊಂದನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.