ಕಲಘಟಗಿಯ ಎನ್ಎಚ್ ರಸ್ತೆಯಲ್ಲಿ ಮೊನ್ನೆ ನಡೆದ ಆಟೋರಿಕ್ಷಾ ಹಾಗೂ ಬಸ್ಸು ಅಪಘಾತ ಘಟನೆಯಲ್ಲಿ ಹುಬ್ಬಳ್ಳಿಯ ಆಟೋ ಚಾಲಕ ಗಣೇಶ್ ಹಾಗೂ ಅವರ ಮಕ್ಕಳಾದ ಆಕಾಂಕ್ಷಾ ಹಾಗೂ ಹರ್ಷಿತ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದವು
ವಿಷಯ ತಿಳಿದ ತಕ್ಷಣವೇ ಸಿದ್ದಾರೂಢ ಆಟೋರಿಕ್ಷಾ ಚಾಲಕರು ಹಾಗೂ ಅಧ್ಯಕ್ಷರು ಅಪಘಾತವಾದ ಸ್ಥಳಕ್ಕೆ ಕೂಡಲೇ ಧಾವಿಸಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲೆ ಮಾಡಿಸಿ ತಮ್ಮ ಮಾನವೀಯತೆ ಮೆರೆದಿದ್ದರೂ
ಈ ವಿಷಯವನ್ನು ಗಮನಕ್ಕೆ ಬರುತ್ತಿದಂತೆಯೇ ಕೂಡಲೇ ಉತ್ತರ ಕರ್ನಾಟಕದ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ ಇವರು ಮೊನ್ನೆ ಆಸ್ಪತ್ರೆಗೆ ಆಗಮಿಸಿ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಮೂರು ಜನರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ವಿನಂತಿಸಿ ಕೊಂಡಿದ್ದರು,
ಅದೇ ರೀತಿ ಇಂದು ಮತ್ತೆ ಆಸ್ಪತ್ರೆಗೆ ಭೇಟಿ ನೀಡಿದ ಶೇಖರಯ್ಯ ಮಠಪತಿಯವರು ಗಾಯಾಳುಗಳಿಗೆ ಹಾಗೂ ಅವರ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು ನಂತರ ವೈದ್ಯಾಧಿಕಾರಿಗಳಿಗೆ ಭೇಟಿಯಾದಾಗ ಅವರು ಮೊದಲಿಗಿಂತ ಸ್ವಲ್ಪ ಚೇತರಿಸಿಕೊಂಡಿದ್ದಾರೆಂದು ತಿಳಿಸಿದ್ದಾರೇ ಅಂತ ಹುಬ್ಬಳ್ಳಿ ಧ್ವನಿ ಸುದ್ದಿ ವಾಹಿನಿಗೆ ಶೇಖರಯ್ಯ ಮಠಪತಿ ಇವರು ತಿಳಿಸಿದ್ದಾರೆ
ವರದಿ ಲೋಹಿತ ಬಸವಾ