ತುಳಜಾಭವಾನಿ ಭಕ್ತರ ಮೇಲೆ ಪ್ರಸಾದ ಎರಚಿದ ಘಟನೆಗೆ ವ್ಯಾಪಾಕ ಆಕ್ರೋಶ

Hubballi Dhwani
ತುಳಜಾಭವಾನಿ ಭಕ್ತರ ಮೇಲೆ ಪ್ರಸಾದ ಎರಚಿದ ಘಟನೆಗೆ ವ್ಯಾಪಾಕ ಆಕ್ರೋಶ
WhatsApp Group Join Now
Telegram Group Join Now
  1. ಹುಬ್ಬಳ್ಳಿ ತುಳಜಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ಘಟನೆ ಇಡೀ ರಾಜ್ಯದ ಎಸ್‌ಎಸ್‌ಕೆ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆ ಕುರಿತು ಕೇವಲ ಎಸ್‌ಎಸ್‌ಕೆ ಸಮಾಜವಷ್ಟೇ ಅಲ್ಲದೇ ಉಳಿದ ಹಿಂದೂ ಸಮುದಾಯಗಳ ಬಾಂಧವರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ದೇವರ ಪ್ರಸಾದ ( ಶೇರವಾ)ದಿಂದ ಹೋಳಿ ಆಡಿದ ಚೀಪ್ ಟ್ರಸ್ಟಿ ಸೇರಿದಂತೆ ಪಂಚ್ ಪ್ರಮುಖರ ನಡೆಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಯನ್ನು ರಾಜ್ಯ ಎಸ್‌ಎಸ್‌ಕೆ ಸಂಘಟನೆಯೂ ಸಹ ಖಂಡಿಸಿದೆ. ಭಕ್ತಿಯಿಂದ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಭಂಗ ತಂದ ಕೆಲವರ ನಡೆಯನ್ನು ಸಮಾಜದ ಬಹುತೇಕರು ಸೋಶಿಯಲ್ ಮಿಡಿಯಾಗಳ ಮುಖಾಂತರ ಖಂಡಿಸುತ್ತಿದ್ದಾರೆ.

ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ಭಂಡಾರ ಪೂಜೆಯನ್ನು ಆಚರಿಸುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದವನ್ನು ಎಲ್ಲರ ಮೇಲೆ ಎರೆಚಿರುವುದು ಎಷ್ಟರ ಮಟ್ಟಿಗೆ ಸರಿ. ಈ ಘಟನೆಯನ್ನು ಮಹಿಳಾ ಭಕ್ತರು ಸಹ ಖಂಡಿಸಿದ್ದಾರೆ. ಹಣ ಪಾವತಿ ಮಾಡಿ ದೇವರಿಗೆ ಪೂಜೆ ಕುಟುಂಬ ಹಾಗೂ ಸಮಾಜಕ್ಕೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಲಾಗುತ್ತದೆ. ಆ ಸಂದರ್ಭದಲ್ಲಿ ನೀಡುವ ಪ್ರಸಾದವನ್ನು ಭಕ್ತರ ಮೇಲೆ ಎರೆಚಿರುವುದು ಎಷ್ಟರ ಮಟ್ಟಿಗೆ ಸರಿ. ದೊಡ್ಡವರು ಎಂದ ಮಾತ್ರ ಎಲ್ಲವನ್ನು ಮಾಡಬಹುದೇ ? ಯಾವುದು ಸರಿ ಯಾವುದು ತಪ್ಪು ಎಂಬ ವಿವೇಚೆನೆ ಬೇಡವೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ದೇವರ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದು ಸರಿಯಲ್ಲ. ನಮ್ಮ ಸಮಾಜ ಇತರೆ ಎಲ್ಲ ಸಮಾಜಗಳಿಗೆ ಮಾದರಿಯಾಗಬೇಕು. ಅದು ಬಿಟ್ಟು

ಮತ್ತೊಬ್ಬರು ನಮ್ಮ ನಡೆ ಕಂಡು ಅಪಹಾಸ್ಯ ಮಾಡಬಾರದು. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಜನ ನಮ್ಮ ಸಮಾಜವನ್ನೇ ಅಪಹಾಸ್ಯ ಮಾಡುವಂತಾಗಿದೆ. ಇದಕ್ಕೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಕ್ಕ ಉತ್ತರ ನೀಡಬೇಕಿದೆ.

ರಾಜ್ಯ ಎಸ್‌ಎಸ್‌ಕೆ ಸೂಚನೆ : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಅಂತಹ ರೀತಿಯಲ್ಲಿ ವರ್ತಿಸುವುದು ಮತ್ತು ಯಾವುದೇ ಮುಂಚೂಣಿಯಲ್ಲಿರುವ ವ್ಯಕ್ತಿಗಳನ್ನು ನಿಂದನೆ ಮಾಡುವುದು ತುಂಬಾ ಬೇಸರದ ಸಂಗತಿಯಾಗಿದೆ

 

ಮೊದಲ ಹಂತದಲ್ಲಿ ಈ ವಿಷಯವನ್ನು ಹುಬ್ಬಳ್ಳಿಯ ಕೇಂದ್ರೀಯ ಪಂಚ ಸಮಿತಿಯ ಸದಸ್ಯರೆ ನಿರ್ಧಾರ ಮಾಡಲು ಸೂಚಿಸಿದೆ.

ಆ ಸಮಿತಿ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ, ಕರ್ನಾಟಕ ರಾಜ್ಯ SSಏ ಸಮಾಜ ಈ ವಿಚಾರದಲ್ಲಿ ಪ್ರವೇಶಿಸಿ ಸೂಕ್ತ ನಿರ್ಧಾರ ಕೈ ಗೊಳ್ಳುತ್ತದೆ.

ಈ ಹಂತದಲ್ಲಿ ರಾಜ್ಯ SSಏ ಸಂಸ್ಥೆಯು ಸರ್ವೋಚ್ಚವಾಗಿದೆ ಮತ್ತು ಇಂತಹ ವಿಚಾರ ಗಳಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯಲ್ಲ ಸಮಾಜ ಮುಖ್ಯ ಎಂದು ನಾವು ಒಪ್ಪಿಕೊಳ್ಳುತ್ತೆವೆ.

ಹಾಗು ಈ ಬಗ್ಗೆ ಇತರ ನಾಯಕರ ಇನ್ಪುಟ್ಗಳನ್ನು ಈ ವಿಷಯದಲ್ಲಿ ಮತ್ತಷ್ಟು ಅಗತ್ಯವಾಗಿ ಪರಿಗಣಿಸುತ್ತೇವೆ. ಅಗತ್ಯವಿದ್ದರೆ, ಸಮಿತಿಯ ಸಂಪೂರ್ಣ ಸದಸ್ಯರ ನಿರ್ಧಾರಕ್ಕೆ ವಿಷಯ ವನ್ನು ಮಂಡಿಸ ಲಾಗುತ್ತದೆ.

ಇಂತಹ ಘಟನೆಗಳು ಮರುಕಳಿಸ ಬಾರದು ಆದ್ದರಿಂದ ನಿಮ್ಮ ಅಭಿಪ್ರಾಯ ವನ್ನು ಹೆಚ್ಚು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲು ಕೋರಿದೆ ಎಂದು ರಾಜ್ಯ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷರಾದ ಡಾ. ಶಶಿಕುಮಾರ್ ಮೆಹರವಾಡೆ ಸೂಚಿಸಿದ್ದಾರೆ.

ಧರ್ಮದರ್ಶಿ ರಾಜಕೀಯಕ್ಕೆ ಸೀಮಿತವಾಗದಿರಲಿ: ಎಸ್‌ಎಸ್‌ಕೆ ಸಮಾಜದ ಮುಖ್ಯ ಧರ್ಮದರ್ಶಿಯಾಗಿರುವ ವ್ಯಕ್ತಿಗಳು, ಯಾವುದೇ ರಾಜಕೀಯ ಪಕ್ಷಗಳ ವ್ಯಕ್ತಿಯಾಗಿರಬಾರದು, ಅವರ ಸೇವೆ ನಮ್ಮ ಸಮಾಜಕ್ಕಾಗಿಯೇ ಮೀಸಲಾಗಿರಬೇಕು, ಅವರು ಕಾಯ ವಾಚ ಮನಸಾ , ಸಂಪೂರ್ಣವಾಗಿ ನಮ್ಮ ಸಮಾಜಕ್ಕಾಗಿಯೇ, ಸೇವೆ ಸಲ್ಲಿಸುವ ಮನೋಧರ್ಮ ಉಳ್ಳವರಾಗಿರಬೇಕು, ಅವರ ಸೇವೆ ನಮ್ಮ ಸಮಾಜಕ್ಕೆ ಒಂದು ಆದರ್ಶ ಪ್ರಾಯವಾಗಿರಬೇಕು, ಅವರ ಸೇವೆ ನಮ್ಮ ಸಮಾಜಕ್ಕಾಗಿ ಮೀಸಲಾಗಿರಬೇಕು,ಹುಬ್ಬಳ್ಳಿ ಧಾರವಾಡ ಸಮಾಜದ ಎಲ್ಲಾ ಘಟಕ ಗಳನ್ನು. ಕೇಂದ್ರ ಪಂಚ ಸಮಿತಿಯಿಂದ ಹೊರಗಿಟ್ಟ ೭ ಘಟಕಗಳನ್ನು ತೆಗೆದುಕೊಂಡು.

ಸಮಾಜದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇರೆಸದೆ. ಎಲ್ಲರನ್ನು ಒಟ್ಟಾಗಿ ಮುನ್ನಡೆಸುವ ವ್ಯಕ್ತಿ ಯನ್ನು ಧರ್ಮದರ್ಶಿ ಯಾಗಿ ನೇಮಿಸಬೇಕೆಂದು ಎಲ್ಲಾ ಸಮಾಜದ ಹಿರಿಯರು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!