Ad imageAd image

ಜಗತ್ತಿನ ಅತ್ಯಂತ ಕ್ರೂರ ಬೇಟೆಗಾರರು ಎಲ್ಲಿದ್ದಾರೆ ಗೋತ್ತಾ? ಮನುಷ್ಯನ ಮಾಂಸವೆಂದರೆ ಬಾಯಿ ಚಪ್ಪರಿತ್ತಾರೆ

Hubballi Dhwani
ಜಗತ್ತಿನ ಅತ್ಯಂತ ಕ್ರೂರ ಬೇಟೆಗಾರರು ಎಲ್ಲಿದ್ದಾರೆ ಗೋತ್ತಾ? ಮನುಷ್ಯನ ಮಾಂಸವೆಂದರೆ ಬಾಯಿ ಚಪ್ಪರಿತ್ತಾರೆ
WhatsApp Group Join Now
Telegram Group Join Now

ಜಗತ್ತಿನ ಅತ್ಯಂತ ಕ್ರೂರ ಬೇಟೆಗಾರರು ಎಲ್ಲಿದ್ದಾರೆ ಗೋತ್ತಾ?
ಮನುಷ್ಯನ ಮಾಂಸವೆಂದರೆ ಬಾಯಿ ಚಪ್ಪರಿತ್ತಾರೆ

ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ ಇನ್ನೂ ಬುಡಕಟ್ಟು ಜನಾಂಗದ ಜನರು ತಮ್ಮ ಸಂಪ್ರದಾಯ ಬಿಟ್ಟಿಲ್ಲ. ಕೆಲವು ಸಂಪ್ರದಾಯಗಳು ವಿಚಿತ್ರ ವಾಗಿದ್ದರೂ ಅವುಗಳನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.
ಇಲ್ಲೊಂದು ಬುಡಕಟ್ಟು ಜನಾಂಗ ತನ್ನ ಆಚರಣೆ ಮೂಲಕವೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಇಲ್ಲಿರುವುದು ವಿಚಿತ್ರ ಜನ ವಿಚಿತ್ರ ಸಂಪ್ರದಾಯ, ಯಾರ ಮೇಲಾದರೂ ದ್ವೇಷ ಇದೆ ಎಂದಾದರೆ ಹೆಚ್ಚೆಂದರೆ ಅವರಿಗೆ ಏಟು ಹಾಕುತ್ತಾರೆ ಇನ್ನೂ ಕ್ರೂರ ವ್ಯಕ್ತಿಗಳಾಗಿದ್ದರೆ ಕೊಲೆ ಮಾಡುತ್ತಾರೆ. ಆದರೆ ಈ ಬುಡಕಟ್ಟು ಜನಾಂಗದವರು ಮಾನವನ ಮಾಂಸವನ್ನೇ ತಿನ್ನುತ್ತಾರೆ.
ಇವರು ಹಬ್ಬಗಳಲ್ಲಿ ಮನುಷ್ಯನ ಮಾಂಸ ತಿಂತಾರೆ, ತಲೆಬುರುಡೆಯಲ್ಲೇ ಆಹಾರ ಬೇಯಿಸ್ತಾರಂತೆ.

ನೇಹಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಕೊಲೆ

ನ್ಯೂ ಗಿನಿಯಾದಲ್ಲಿರುವ ಅಸ್ಮತ್ ಬುಡಕಟ್ಟು ಜನಾಂಗವು ಮಾನವನ ರಕ್ತವನ್ನು ಕುಡಿಯಲು ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ ಹಬ್ಬಗಳಲ್ಲಿ ಮಾನವನ ಮಾಂಸವನ್ನು ತಲೆಬುರುಡೆಯೊಳಗೇ ಬೇಯಿಸಿ ತಿಂತಾರಂತೆ.

ಇಂಡೋನೇಷ್ಯಾದ ದಕ್ಷಿಣ ಪಪುವಾ ಪ್ರಾಂತ್ಯದಲ್ಲಿ 10,000 ಚದರ ಮೈಲುಗಳಷ್ಟು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. 1950 ರವರೆಗೆ ಪ್ರತ್ಯೇಕವಾಗಿಯೇ ಇದ್ದರು. ಯಾವುದೇ ಹೊರಗಿನವರ ಸಂಪರ್ಕಕ್ಕೆ ಬಂದಿರಲಿಲ್ಲ. ಅವರು ತಮ್ಮ ಮುಖವನ್ನು ಬಣ್ಣದಿಂದ ಮುಚ್ಚಿಕೊಳ್ಳುತ್ತಾರೆ. ತಲೆಯ ಮೇಲೆ ಟೋಪಿ ಮತ್ತು ಹೆಡ್‌ಹಂಟರ್ ಈಟಿಯನ್ನು ಹೊಂದಿರುತ್ತಾರೆ, ಅದರಿಂದ ಅವರು ಬೇಟೆಯಾಡುತ್ತಾರೆ. ಅವರನ್ನು ಅತ್ಯಂತ ಕ್ರೂರ ಬೇಟೆಗಾರರು ಎಂದು ಪರಿಗಣಿಸಲಾಗುತ್ತದೆ.

ಸೇಡು ತೀರಿಸಿಕೊಳ್ಳಲು ಶತ್ರುಗಳ ತಲೆಬುರುಡೆಯನ್ನು ಕಡಿಯುತ್ತಾರೆ, ಬಳಿಕ ಜನರ ರಕ್ತ ಕುಡಿಯುತ್ತಾರೆ. ಅವರ ಮಾಂಸವನ್ನೂ ತಿನ್ನುತ್ತಾರೆ. ತಮ್ಮ ಬುಡಕಟ್ಟಿನ ಸದಸ್ಯನನ್ನು ಕೊಂದರೆ ಶತ್ರುಗಳ ತಲೆ ಕಡಿಯುವವರೆಗೂ ಅವರು ಸುಮ್ಮನಿರುವುದಿಲ್ಲ. ಪುರುಷನಾಗಿರಲಿ, ಮಹಿಳೆಯಾಗಿರಲಿ ಮಗುವಾಗಿರಲಿ ಅವರ ತಲೆಗಳನ್ನು ಅಡುಗೆಗೆ ಬಳಸಲಾಗುತ್ತಿತ್ತು.

 

WhatsApp Group Join Now
Telegram Group Join Now
Share This Article
error: Content is protected !!