ಹುಬ್ಬಳ್ಳಿ : ಲೋಕಸಭಾ ಚುನಾವಣೆಗೆ ಮೇ 7 ರಂದು ಮತದಾನ ನಡೆಯುವುದರಿಂದ ಚುನಾವಣಾ ಕಾರ್ಯಕ್ಕಾಗಿ ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ವಿಭಾಗಗಳಾದ ಹುಬ್ಬಳ್ಳಿ ಗ್ರಾಮಾಂತರ -85, ಹು-ಧಾ ನಗರ ಸಾರಿಗೆ-84, ಧಾರವಾಡ-124, ಗದಗ-132, ಬೆಳಗಾವಿ-169, ಉತ್ತರ ಕನ್ನಡ-137, ಹಾವೇರಿ-224, ಚಿಕ್ಕೋಡಿ-350 ಮತ್ತು ಬಾಗಲಕೋಟೆ-219 ಸೇರಿದಂತೆ ಒಟ್ಟು 1524 ಬಸ್‌ಗಳನ್ನು ನೀಡಲಾಗಿರುತ್ತದೆ.
ಮೇ 6 ಮತ್ತು 7 ರಂದು ಸಾರಿಗೆ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣೆ; 1524 ಬಸ್‌ಗಳ ಕಾರ್ಯಾಚರಣೆ
