ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಕೆ ಹೆಚ್ ಬಿ ಕಾಲೋನಿ ಹತ್ತಿರ ನಂದೀಶ್ವರ ನಗರ ನವನಗರ ಹುಬ್ಬಳ್ಳಿ ಹತ್ತನೇ ವರ್ಷದ ಶ್ರೀ ಪಂಚಮುಖಿ ಆಂಜನೇಯನ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ನವನಗರ ನವ ನಿರ್ಮಾಣ ಸಂಘ ಹಾಗೂ ಸುತ್ತು ಮುತ್ತಲಿನ ಗುರು ಹಿರಿಯರು ನಿರ್ಣಯಿಸಲಾಗಿ ದಿನಾಂಕ 20-11-2024 ರಂದು ವಿವಿಧ ವಾದ್ಯ ಮೇಳಗಳೊಂದಿಗೆ ಕುಂಭಮೇಳ ಪ್ರಾರಂಭವಾಗುವುದು. ದಿನಾಂಕ 21-11-2024 ರಂದು ಪೂಜೆ ಹವನ ಜಾತ್ರಾ ಮಹೋತ್ಸವ ನೆರವೇರುವುದು. ದಿನಾಂಕ 22-11-2018 ಸಾಯಂಕಾಲ 5:00 ಗಂಟೆಗೆ ನೃತ್ಯ ಮತ್ತು ಸ್ಪೇಜ್ ಹೋ ಇರುವದು. ದಿನಾಂಕ 23-11-2024 ರಂದು ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಜರಗುವುದು. ದಿನಾಂಕ್ 24-11-2024 ರಂದು ಸಾಯಂಕಾಲ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮಗಳು ನೆರವೇರುವವು. ಐದು ದಿನಗಳ ಕಾಲ ಅನ್ನಸಂತರ್ಪಣೆ ನೆರವೇರುವುದು.ಅಲ್ಲದೆ ದಿನಾಂಕ 16 17 ನವಂಬರ್ 2024 ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣು ತಪಾಸಣಾ ಶಿಬಿರ, ಹೃದಯ ತಪಾಸಣಾ ಶಿಬಿರಗಳು ನೆರವೇರುತ್ತವೆ. ಉಚಿತ ತಪಾಸಣಾ ಶಿಬಿರವನ್ನು ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆಯ ವೈದ್ಯರಾದ ಡಾ. ಅಭಿಷೇಕ್ ಪಾಟೀಲ್ ಅವರು ನೆರವೇರಿಸಿಕೊಡಲಿದ್ದಾರೆ ನೂರಾರು ಮಹಿಳೆಯರಿಂದ ಕುಂಭಮೇಳ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಮಹಾರಾಷ್ಟ್ರ ಮಹಿಳೆಯರ ವಾದ್ಯಮೇಳ ಆಗಮಿಸಲಿದೆ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ ಇರುವ ಭಜರಂಗಿ ಮೈದಾನದಲ್ಲಿ ಜಾಯಿಂಟ್ ವೀಲ್ ಅಮ್ಯೂಸ್ಟೆಂಟ್ ಪಾರ್ಕ್ ಅಳವಡಿಸಲಾಗುತ್ತಿದೆ ಅಲ್ಲದೆ ಸುಮಾರು ನೂರಾರು ವಾಣಿಜ್ಯ ಮಳಿಗೆಯನ್ನು ಟೆಂಟ್ ಮೂಲಕ ಅಳವಡಿಸಲಾಗುತ್ತಿದೆ ಸ್ಟಾಲ್ ಹಾಕುವವರು (9620769469, 9916006009)ಈ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಮಂಡಳಿ ವಿನಂತಿಸಿಕೊಳ್ಳುತ್ತದೆ ದಯವಿಟ್ಟು ಎಲ್ಲ ಮಾಧ್ಯಮದವರಿಗೆ ಈ ವಿಷಯವನ್ನು ಎಲ್ಲ ಪತ್ರಿಕೆ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಮಂಡಳಿಯ ಅಧ್ಯಕ್ಷರಾದ ಬಾಲರಾಜ್ ದೊಡ್ಡಮನಿ ಕಾರ್ಯಾಧ್ಯಕ್ಷರಾದ ಮಲ್ಲಯ್ಯಜ್ಜ ಹಿರೇಮಠ ಕಾರ್ಯದರ್ಶಿಗಳಾದ ಪ್ರಶಾಂತ್ ಪೂಜಾರಿ ಖಜಾಂಚಿ ಸುನಿಲ್ ರೇವಣಕರ್ ಸೂರಜ್ ಗೌಡ ಬಬು ಲಕ್ಷ್ಮಣ ಹಂಚಿನಮನಿ ಪ್ರವೀಣ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವರು