ಚಿಕ್ಕ ಮಕ್ಕಳ ಜ್ಞಾನ ದಿಂದ ವಿಜ್ಞಾನ ವಸ್ತು ಪ್ರದರ್ಶನ
ಮಕ್ಕಳ ಜ್ಞಾನಕ್ಕೆ ಮನಸೋತ ಜನತೆ
ಕಲಘಟಗಿ : ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಲಯದ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಳೆ ನೀರು ಸಂಗ್ರಹದಿಂದ ಆಗುವ ಉಪಯೋಗ, ಹಸಿರು ಮನೆ, ಮನುಷ್ಯನ ದೇಹದ ಬಿಡಿ ಭಾಗಗಳು, ಕೃಷಿ ತೋಟ, ಇನ್ನೂ ಅನೇಕ ವಿಜ್ಞಾನ ಮಾದರಿ ಪ್ರಯೋಗ ನಿರ್ಮಾಣ ಮಾಡಿದ ಶಾಲೆಯ ವಿದ್ಯಾರ್ಥಿಗಳು ಹಾಗೂ ಗಣ್ಯರನ್ನು ಆಕರ್ಷಿಸುವ ವಿಜ್ಞಾನ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯಿತು. ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಎಎಂ. ನಿಂಗೂಜಿ ಮಾತನಾಡಿದರು ಮಕ್ಕಳ ಜ್ಞಾನದ ಅಭಿರುಚಿಯಿಂದ ವಿಜ್ಞಾನ ಮಾದರಿಯ ವಸ್ತು ಪ್ರದರ್ಶನದ ಮುಖಾಂತರ ಜ್ಞಾನದ ಭೌತಿಕ ಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕೆ ಐ. ಕೊಂಗಿ, ಶ್ರೀಮತಿ ಶಾರದಾ ಎನ್ ಪಾಟೀಲ್, ಶ್ರೀಮತಿ ಸಹನಾ ರಡ್ಡಿ, ವಾಮನ ನಾಡಗೇರ, ಎಸ್ ಎಸ್ ಸಾಹುಕಾರ್, ಎಎಂ ವರದಾನಿ, ವಿವೇಕಾನಂದ ಸ್ಕೂಲಿನ ಶಿಕ್ಷಕರು ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.