ಕಲಘಟಗಿ; ಚುನಾವಣಾ ಚುನಾವಣಾ ಅಧಿಕಾರಿಯೊಬ್ವರೂ ಅರ್ಭ್ಯರ್ಥಿಯೊಬ್ಬರಿಗೆ ಮತ ಹಾಕಲು ಒತ್ತಾಯ ಮಾಡಿದ ಘಟನೆ ತಶಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಅಧಿಕಾರಿಯ ನಡೆಗೆ ಬಮ್ಮಿಗಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕ ಕಿರಣ ಹುಲಮನಿ ಎಂಬಾತ ಮತದಾನಕ್ಕೆ ತೆರಳಿದ ಸಂದರ್ಭದಲ್ಲಿ ಅಧಿಕಾರಿ ಇಂತವರಿಗೆ ಮತ ಹಾಕಿ ಎಂದು ಒತ್ತಾಯ ಮಾಡಿದ್ದಾರೆ. ಕೂಡಲೇ ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆಯೇ ಅಧಿಕಾರಿಯನ್ನು ಮತಗಟ್ಟೆಯಿಂದ ಬೇರೆಡೆ ಕಳುಹಿಸಲಾಗಿದೆ. ಕೂಡಲೇ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.