ಈ ರಾಜಕೀಯವೇ ಹೀಗೆ ಎಂದರೆ ತಪ್ಪಾಗಲಾರದು..*
ಎಂತೆಂತ ವಿಭಿನ್ನ ವಿಭಿನ್ನ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ,
ಆದರೆ ಅದಕ್ಕೂ ಮೀರಿದ ರಾಜಕೀಯ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆಯೋ, ಏನೋ ಎಂಬಂತೆ ಭಾಸವಾಗುತ್ತಿದೆ..
ಹೌದು ವೀಕ್ಷಕರೇ, ಇದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಇರುವ ಸ್ಮಶಾನಗಟ್ಟಿ ಯ ಸುದ್ದಿ,
ಪುರಾತನ ಕಾಲದಿಂದ ಇರುವ ಈ ಸ್ಮಶಾನಕ್ಕೆ ಹೊಂದಿಕೊಂಡ ಜಾಗದಲ್ಲಿ ಮಾನ್ಯ ಪ್ರಸಾದ ಅಬ್ಬಯ್ಯ್ ಸಾಹೇಬರು, ಬಡ ಹಾಗೂ ನಿರ್ಗತಿಕರ ಜನತೆಗೆಂದು ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿದ್ದಾರೆ, ಅದನ್ನು ಬಿಜೆಪಿಯ ಯುವ ಮುಖಂಡ ಅನೂಪ್ ಬೀಜವಾಡ ಸೇರಿದಂತೆ, ಅಲ್ಲಿನ ಕೆಲ ಸ್ಥಳೀಯ ಮುಖಂಡರುಗಳು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ,
ಬಡ ಹಾಗೂ ನಿರ್ಗತಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಇಂತಹ ನೂರು ಇಂದಿರಾ ಕ್ಯಾಂಟೀನ್ ಬೇಕಾದರೂ ನಿರ್ಮಿಸಿಕೊಳ್ಳಿ, ಆದರೆ ಸ್ಮಶಾನ ಗಟ್ಟಿ ಜಾಗೆಯಲ್ಲಿ ಬೇಡ ಅನ್ನೋದು ಮಾತ್ರ ನಮ್ಮ ವಾದ,
ಸ್ಮಶಾನಗಟ್ಟಿಯಲ್ಲೇ ಕ್ಯಾಂಟೀನ್ ನಿರ್ಮಿಸುವುದರಿಂದ, ಅಲ್ಲಿ ದಟ್ಟವಾದ ಹೊಗೆ, ಕೆಟ್ಟ ದುರ್ವಾಸನೆ, ಕ್ರೀಮಿಕೀಟಗಳ ಹಾವಳಿ, ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳು ಉಪಹಾರ ಸೇವನೆ ಸಂಧರ್ಭದಲ್ಲಿ ಉದ್ಭವ ವಾಗುವ ಸಾಧ್ಯತೆ ಇರುವುದರಿಂದ, ಸ್ಥಳೀಯರ ಜೊತೆಗೆ ಚರ್ಚಿಸಿ ಈ ಹೋರಾಟ ಮಾಡುತ್ತಿದ್ದೇವೆ, ಎಂಬುದು ಒಂದು ಪಕ್ಷದವರ ವಾದವಾದರೆ ಮತ್ತೊಂದು ಪಕ್ಷದ ಕಡೆಯಿಂದ
ಸ್ಥಳೀಯರು ನಮಗೆ ಅದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಬೇಕು ಎಂದು ಪ್ರಸಾದ್ ಅಬ್ಬಯ್ಯ ನವರಿಗೆ ಬೇಡಿಕೆ ಇಡುತ್ತಿದ್ದಾರೆ, ಇದರ ಮದ್ಯೆ ಮಹಾನಗರ ಪಾಲಿಕೆ ಆಯುಕ್ತರು ಯಾವ ನಿರ್ಣಯ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡ ಬೇಕಾಗಿದೆ..