ವಾಷಿಂಗ್ಟನ್(ಅಮೆರಿಕ): ಚೀನಾದ ಟೆಕ್ ಕಂಪನಿ ರಿಯಲ್‌ಮಿ ತನ್ನ ಹೊಸ ಸ್ಮಾರ್ಟ್ ವಾಚ್ ರಿಯಲ್ ಮಿ ವಾಚ್ ಎಸ್2 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಜುಲೈ 30 ರಂದು ಭಾರತದಲ್ಲಿ ನಡೆಯಲಿರುವ ಈವೆಂಟ್ನಲ್ಲಿ ರಿಯಲ್ ಮಿ 13 ಪ್ರೊ ಸರಣಿಯ ಸ್ಮಾರ್ಟ್ಫೋನ್ ಜೊತೆಗೆ ರಿಯಲ್ ಮಿ ವಾಚ್ ಎಸ್ 2 ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಜಿಎಸ್ಎಂ ಅರೆನಾ ಪ್ರಕಾರ, ಈ ಸ್ಮಾರ್ಟ್ ವಾಚ್ ಚಾಟ್ ಜಿಪಿಟಿಯಿಂದ ಚಾಲಿತವಾಗಿರುವ ಎಐ ಪರ್ಸನಲ್ ಅಸಿಸ್ಟೆಂಟ್ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಂಪನಿಯ ಇತರ ವೈಶಿಷ್ಟ್ಯಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಬ್ರ್ಯಾಂಡ್ ಪರ್ಸನಲ್ ಅಸಿಸ್ಟೆಂಟ್ ಇದರಲ್ಲಿನ ಪ್ರಮುಖ ಹೈಲೈಟ್ ಆಗಿದೆ ಎಂದು ತಿಳಿದು ಬಂದಿದೆ.
ಚಾಟ್ ಜಿಪಿಟಿಯೂ ಇದರಲ್ಲಿ ಉಂಟು: ಚಾಟ್ ಜಿಪಿಟಿ ತಂತ್ರಜ್ಞಾನದೊಂದಿಗೆ ನವೀನ ವೈಶಿಷ್ಟ್ಯಗಳು ಇರುವುದರಿಂದಾಗಿ ಬಳಕೆದಾರರು ಸ್ಮಾರ್ಟ್ ವಾಚ್ನಿಂದ ಉತ್ತಮ ಕಾರ್ಯಕ್ಷಮತೆ ಮತ್ತು ಯೂಸರ್ ಫ್ರೆಂಡ್ಲಿ ಅನುಭವವನ್ನು ನಿರೀಕ್ಷಿಸಬಹುದು. ಈ ವಾಚ್ ಟೆಕ್ ಉತ್ಸಾಹಿಗಳು ಮತ್ತು ವಾಚ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಅನ್ವೇಷಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಭಾರತದಲ್ಲಿ ರಿಯಲ್‌ಮಿಯ ರಿಯಲ್‌ಮಿ 13 ಪ್ರೊ 5 ಜಿ ಸರಣಿ ಫೋನ್ ಮತ್ತು ರಾಯಲ್ ವೈಲೆಟ್ ಬಣ್ಣದ ರಿಯಲ್‌ಮಿ ಬಡ್ಸ್ ಏರ್ 6 ಲಾಂಚ್ ಇತ್ತೀಚಿಗೆ ಬಿಡುಗಡೆಯಾಗಿದ್ದವು. ಈಗ Realme 13 Pro ಸರಣಿಯ ರಿಯಲ್‌ಮಿ 13 ಪ್ರೊ ಮತ್ತು ರಿಯಲ್‌ಮಿ 13 ಪ್ರೊ + ಎಂಬ ಎರಡು ವೇರಿಯಂಟ್ಗಳು ಜು.30ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.
ಎರಡೂ ಫೋನ್ ಗಳು ಎಐ ವೈಶಿಷ್ಟ್ಯಗಳೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಹೊಂದಿದೆ. ಇನ್ನು ಬಳಸಲಾದ ಪ್ರೊಸೆಸರ್ ಹಾಗೂ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಎಲ್ಲಾ ಮಾಹಿತಿ Realme ವೆಬ್‌ಸೈಟ್‌ನಲ್ಲಿ ಶೀಘ್ರವೇ ಸಿಗಲಿದೆ ಎಂದು ತಿಳಿಸಿದೆ.