IPL ನಂತರ ಮುಂಬೈಗೆ ರೋಹಿತ್ ಗುಡ್ಬೈ..?
ಈ ಬಾರಿಯ ಮುಂಬೈ ಇಂಡಿಯನ್ಸ್ ಫ್ಲಾಪ್ ಶೋ ನೀಡಿರುವುದು ಎಲ್ಲರಿಗೂ ಗೋತ್ತಿರುವ ವಿಚಾರ. ಫ್ರಾಂಚೈಸಿಗೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕನಾಗಿ ನೇಮಿಸಿದ ನಂತರ ಫ್ರಾಂಚೈಸಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದೆ. ಸ್ವಂತ ಅಭಿಮಾನಿಗಳು ಸಹ ಫ್ರಾಂಚೈಸಿ ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದರು. ಐಪಿಎಲ್ ಆರಂಭದಲ್ಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದ್ದರು.
.ತಂಡದ ಹೀನಾಯ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವವೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಮುಂಬೈ ಟೀಮ್ ಎರಡೂ ಬಣಗಳಾಗಿ ಒಡೆದಿದೆ.ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಕುಮಾರ್ ಯಾದವ್ ಒಂದು ಬಣವಾದ್ರೆ, ಹಾರ್ದಿಕ್ ಪಾಂಡ್ಯನದ್ದೇ ಮತ್ತೊಂದು ಬಣವಾಗಿದೆ.
ಇದರಿಂದಾಗಿ ರೋಹಿತ್ ಶರ್ಮಾ ತಂಡ ತೊರೆಯುವ ಬಗ್ಗೆ ಚಿಂತಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸಹಾಯಕ ಕೋಚ್ ಮತ್ತು ಮತ್ತೊಬ್ಬ ಮುಂಬೈಕರ್ ಅಭಿಷೇಕ್ ನಾಯರ್ ಜೊತೆ ರೋಹಿತ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಹಿಟ್ ಮ್ಯಾನ್ ಮಾತು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮುಂಬೈ ಇಂಡಿಯನ್ಸ್ ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ರೋಹಿತ್ ಅಭಿಷೇಕ್ ಗೆ ವಿವರಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಜೊತೆ ಮಾತನಾಡಿದ ರೋಹಿತ್ ಅವರು ನೇರವಾಗಿ ಮುಂಬೈ ಇಂಡಿಯನ್ಸ್ ಬಗ್ಗೆ ಹೇಳದೆ ಎಂಐ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. “ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಆದರೆ ಅದು ಅವರ ನಿರ್ಧಾರ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೇಗಾದರೂ, ಇದು ನನ್ನ ಮನೆ. ಇದು ನಾನು ಕಟ್ಟಿದ ದೇವಾಲಯ. ಅದೇನೇ ಇರಲಿ, ಇದು ನನ್ನ ಕೊನೆಯದು” ಎಂದು ರೋಹಿತ್ ಹಿಂದಿಯಲ್ಲಿ ನಾಯರ್ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ.
ಆಡಿಯೋ ಸ್ಪಷ್ಟವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರೋಹಿತ್ ನಾಯರ್ ಭಾವನಾತ್ಮಕವಾಗಿ ಮಾತನಾಡಿ ಇದು ಕೊನೆಯ ಸೀಸನ್ ಎಂಬ ಸುಳಿವು ನೀಡುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಹಿಟ್ಮ್ಯಾನ್ ಮುಂಬೈಗೆ ಇದು ಕೊನೆಯ ಸೀಸನ್ ಅಥವಾ ಐಪಿಎಲ್ನ ಕೊನೆಯ ಸೀಸನ್ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಕ್ಲಿಪ್ ಅನ್ನು ಇದೀಗ KKR ನ ಸಾಮಾಜಿಕ ಮಾಧ್ಯಮ ಪುಟದಿಂದ ತೆಗೆದುಹಾಕಲಾಗಿದೆ
ಆರ್ ಸಿಬಿಗೆ ಆಹ್ವಾನ
ನೀವು ನಮ್ಮ ತಂಡಕ್ಕೆ ಬಂದು ಬಿಡಿ. ರಾಜನಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಮುಂಬೈ ತಂಡವನ್ನು ಬಿಟ್ಟುಹೋಗುವುದನ್ನು ನೋಡುವುದು ಕಷ್ಟವಾಗುತ್ತದೆ ಎಂದು ಹಿಟ್ಮ್ಯಾನ್ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಮುಂದಿನ ಐಪಿಎಲ್ಗೆ ರೋಹಿತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಸೇರಿದಂತೆ ಹಲವರು ತಂಡವನ್ನು ತೊರೆಯವ ಸಾಧ್ಯತೆ ಇದೆ.