ಧಾರವಾಡ; ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಗೆ ಗುಡ ಬೈ ಹೇಳಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಕಿತ್ತೂರಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಬಹಿರಂಗ ಸಮಾವೇಶದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಮತಯಾಚಿಸಿ ಮಾತನಾಡಿದರು.
ಜನರು ಬಿಜೆಪಿ ಆಡಳಿತದಿಂದ ಕಂಗೆಟ್ಟಿದ್ದಾರೆ. ಎಲ್ಲವುಗಳ ಬೆಲೆ ಏರಿಕೆಯಾಗಿದೆ.
ರೂ.26 ಸಾವಿರದ ಬಂಗಾರ ರೂ.77ಸಾವಿರ ದಾಟಿದೆ. ೩೦೦ ರೂಪಾಯಿ ಇದ್ದ ಸಿಂಡರ್ ರೂ. ೧,೨೦೦ ಆಗಿದೆ ಎಂದರು.
ದೇಶದಲ್ಲಿ ಶೇ.69ರಷ್ಟು ವಿದ್ಯಾವಂತರಿಗೆ ಉದ್ಯೋಗವಿಲ್ಲ. ದೇಶದ ಹಣ ಅಂಬಾನಿ, ಅದಾನಿಗೆ ಲೂಟಿ ಮಾಡಲು ಬಿಟ್ಟ ಪ್ರಧಾನಿ ಮೋದಿ ವಿದೇಶ ಸುತ್ತುವ ಮೂಲಕ ಮೋಜು-ಮಸ್ತಿ ಮಾಡುತ್ತಿರುವುದಾಗಿ ಆರೋಪಿಸಿದರು.
ಮೋದಿ ಜನ್ಮದಿನಕ್ಕೆ ರೂ.೬೦ ಕೋಟಿ ಖರ್ಚು ಮಾಡಿ ವಿದೇಶದಿಂದ ತಂದ ೧೦ ಚಿತಾ ಮೃತಪಟ್ಟಿವೆ. ಆದರೆ, ಈ ಭಾಗದ ಮಹದಾಯಿ ಅನಷ್ಠಾನಕ್ಕೆ ಹುಲಿ ಕಾರಿಡಾರ್ ನೆಪ ಹೇಳುವುದು ನಾಚಿಗೇಡಿನ ಸಂಗತಿ ಎಂದರು.
ಅಭ್ಯರ್ಥಿ ವಿನೋದ ಅಸೂಟಿ, ಶಾಸಕರಾದ ವಿನಯ ಕುಲಕರ್ಣಿ, ಎನ್.ಎಚ್.ಕೋನರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಇಸ್ಮಾಯಿಲ್ ತಮಟಗಾರ ಇತರರು ಇದ್ದರು.
ಬಿಜೆಪಿಗೆ ಗುಡಬೈ ಹೇಳಿ; ಲಾಡ್
