ನವರಾತ್ರಿ ಹಬ್ಬದ ಐದನೇ ದಿನದಂದು ದುರ್ಗಾ ದೇವಿಯ 5ನೇ ರೂಪವಾದ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. 2024 ರ ನವರಾತ್ರಿ 5ನೇ ದಿನವನ್ನು ಅಕ್ಟೋಬರ್ 7 ರಂದು ಸೋಮವಾರ ಆಚರಿಸಲಾಗುವುದು.
ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತಾ ತಾಯಿ ಪಾರ್ವತಿಯ ಒಂದು ರೂಪವಾಗಿದೆ. ಈಕೆಯನ್ನು ನವರಾತ್ರಿ ಹಬ್ಬದ 5ನೇ ದಿನದಂದು ಪೂಜಿಸಲಾಗುತ್ತದೆ. ಒಮ್ಮೆ ತಾಯಿ ಪಾರ್ವತಿಯು ಕೋಪಗೊಂಡು ಕುಮಾರ ಕಾರ್ತಿಕೇಯನನ್ನು ರಕ್ಷಿಸಲು ಆದಿಶಕ್ತಿಯ ರೂಪದಲ್ಲಿ ಕಾಣಿಸಿಕೊಂಡಾಗ ಇಂದ್ರನು ಭಯದಿಂದ ನಡುಗಲು ಪ್ರಾರಂಭಿಸಿದನು. ಇಂದ್ರನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಬಳಿ ಕ್ಷಮೆಯನ್ನು ಕೇಳಿದನು. ಕುಮಾರ ಕಾರ್ತಿಕೇಯನ ಒಂದು ಹೆಸರು ಕೂಡ ಸ್ಕಂದ ಆಗಿರುವುದರಿಂದ, ಎಲ್ಲಾ ದೇವತೆಗಳು ದುರ್ಗಾ ದೇವಿಯ ಈ ರೂಪವನ್ನು ಪೂಜಿಸಲು ಮತ್ತು ಆಕೆಗೆ ಗೌರವವನ್ನು ನೀಡಲು ಆಕೆಯನ್ನು ಸ್ಕಂದಮಾತೆ ಎಂದು ಕರೆಯಲು ಪ್ರಾರಂಭಿಸಿದರು ಮತ್ತು ಅವಳನ್ನು ಸ್ತುತಿಸಲು ಪ್ರಾರಂಭಿಸಿದರು. ಅಂದಿನಿಂದ, ನವರಾತ್ರಿ ಹಬ್ಬದ 5ನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತೆ ರೂಪವನ್ನು ಪೂಜಿಸಲಾಗುತ್ತದೆ.