ಕಲಘಟಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕ ಅಮರ್ ಎನ್.ನಾಯ್ಕರ ಚಾಲನೆ ನೀಡಿದರು
ರೈತರು ಭೂಮಿಯಲ್ಲಿನ ತೇವಾಂಶ ಹಾಗೂ ತಾಪಮಾನ ನೋಡಿಕೊಂಡು ಸೋಯಾ ಅವರೆ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಲು ಅನುಕೂಲವಾಗುತ್ತದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಮರ್ ಎನ್.ನಾಯ್ಕರ ಹೇಳಿದರು.
ಮೇ 1 ರಿಂದ ಮೇ 23 ರವರೆಗೆ ವಾಡಿಕೆಯಂತೆ 50 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 85 ಮಿ.ಮೀ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ 37,920 ಹೆಕ್ಟೇರ್‌ನಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಸೋಯಾ ಅವರೆ 1,740 ಕ್ವಿಂಟಲ್, ಭತ್ತ 240 ಕ್ವಿಂಟಲ್, ಗೋವಿನ ಜೋಳ 1,960 ಕ್ವಿಂಟಲ್ ಹಾಗೂ ತೊಗರಿ 22 ಕ್ವಿಂಟಲ್ ಸೇರಿದಂತೆ 3,962 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ ಎಂದು ಹೇಳಿದರು