Ad imageAd image

ಮಂಡಳದಿoದ ಗಣೇಶ ಭಾವಿಗೆ ವಿಶೇಷ ಪೂಜೆ

Hubballi Dhwani
ಮಂಡಳದಿoದ ಗಣೇಶ ಭಾವಿಗೆ ವಿಶೇಷ ಪೂಜೆ
WhatsApp Group Join Now
Telegram Group Join Now

 ಮಂಡಳದಿoದ ಗಣೇಶ ಭಾವಿಗೆ ವಿಶೇಷ ಪೂಜೆ

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ಇಂದು ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಶ್ರೀ ಗಣೇಶ ಭಾವಿಗೆ ವಿಶೇಷ ಪೂಜಾ, ಹೋಮ, ಹವನ ಸಮಾರಂಭ ಜರಗಿತು

ಪೂಜಾ ಸಮಾರಂಭದ ದಿವ್ಯ ಸನ್ನಿಧಾನವನ್ನು ಶ್ರೀ ಮ. ನಿ. ಜಗದ್ಗುರು ಡಾ|| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಪೂಜಾ ಸಮಾರಂಭವನ್ನು ನಡೆಸಿಕೊಟ್ಟು ಆಶೀರ್ವದಿಸಿದ ಅವರು ದೇವರು ಕೊಟ್ಟ ನೀರು ನಾವು ಪಾವಿತ್ರತೆ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಗಂಗಾ ಶುದ್ಧಿಕರಣಕ್ಕಾಗಿ ಪೂಜೆ, ಹೋಮ, ಹವನ, ಮಂತ್ರ ಘೋಷಣೆಯಿಂದ ಸಾಧ್ಯ ಗಂಗಾ ಮಾತೆಯ ಪೂಜೆ ಶುದ್ಧೀಕರಣಕ್ಕಾಗಿ ಅಗ್ನಿ ಸಾಕ್ಷಿಯಾಗಿದೆ ಅಗ್ನಿಯು ದುಷ್ಠ ಶಕ್ತಿಗಳನ್ನೆಲ್ಲ ನಾಶ ಮಾಡಿ ಬದುಕಲು ಮತ್ತು ಪಾವಿತ್ರತೆ ಹೆಚ್ಚಿಸಲು ಅಗ್ನಿ ಒಂದು ದೊಡ್ಡ ಶಕ್ತಿಯಾಗಿದೆ ಮಂತ್ರ ಪಠಣ, ಹೋಮದಿoದ ಭಗವಂತನನ್ನು ಧರೆಗೆ ಬರುವಂತೆ ಮಾಡಿ ನಮ್ಮ ಇಷ್ಟಾರ್ಥಗಳನ್ನು ಪೂರೈಸಲು ದೇವರನ್ನು ಆಹ್ವಾನಿಸಿ ನಾವು ಪುನೀತರಾಗುತ್ತೇವೆ ಮತ್ತು ಮನಸ್ಸು, ಸಂತೃಪ್ತಿಯಿಂದ ಇಮ್ಮಡಿಗೊಳ್ಳುತ್ತದೆ ಜೀವನ ನಡೆಸಲು ಯಾರು ಸಹಾಯ ಕಲ್ಪಿಸುತ್ತಾರೆ ಅವರನ್ನು ನಾವು ಕೃತಜ್ಞತೆಯಿoದ ಕಾಣಬೇಕು ಹಾಗೆ ದೇವರು ನಮಗೆ ಜೀವನ ನಡೆಸಲು ಗಾಳಿ, ಬೆಳಕು, ನೀರು, ಭೂಮಿ ಹೀಗೆ ಹಲವಾರು ರೀತಿಯಿಂದ ನಾವು ಬದುಕಲು ಕಲ್ಪಿಸಿಕೊಟ್ಟಿದ್ದಾನೆ ಆದ್ದರಿಂದ ಆ ಭಗವಂತನನ್ನು ಸದಾ ಪೂಜಿಸುವುದು ನಮ್ಮ ಧರ್ಮವಾಗಬೇಕು.

ಮಹಾನಗರ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪೂಜಾ ವಿಧಿ ವಿಧಾನದಲ್ಲಿ ನೀಲಕಂಠಸ್ವಾಮಿ ಹಿರೇಮಠ ಹಾಗು ಹರಗುರು ಚರಮೂರ್ತಿಗಳಿಂದ ಮತ್ತು ವಿಶ್ವನಾಥ ಹಿತ್ತಾಳಿ, ಪುಷ್ಪಾ ಹಿತ್ತಾಳಿ ಇವರಿಂದ ಪೂಜಾ ಸಮಾರಂಭ ಜರಗಿತು.

ಪೂಜ್ಯರು ಹಾಗೂ ಗಣೇಶ ಭಕ್ತರು ಭಾವಿಗೆ ವಿಶೇಷ ಪೂಜೆ ಸಲ್ಲಿಸಿ ಗಂಗಾ, ಕಾವೇರಿ, ತುಂಗಾಭದ್ರಾ, ಮಲಪ್ರಭಾ, ನೇತ್ರಾವತಿ ನದಿಗಳಿಂದ ತಂದ ತೀರ್ಥಗಳನ್ನು ಭಕ್ತಿ ಪೂರ್ವಕವಾಗಿ ಭಾವಿಗೆ ಅರ್ಪಿಸಿ ಬರುವ ಗಣೇಶ ಹಬ್ಬದ ವಾತಾವರಣದಲ್ಲಿ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಬೇಡಿಕೊಂಡರು.

ಈ ಸಂದರ್ಭದಲ್ಲಿ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಅಮರೇಶ ಹಿಪ್ಪರಗಿ, S. S. ಕಮಡೋಳ್ಳಿಶೆಟ್ಟರ್, ಅನಿಲ ಕವಿಶೆಟ್ಟಿ, ಸಂತೋಷ ಕಾಟವೆ, ಅನಿಲ ಬೇವಿನಕಟ್ಟಿ, ಗುರುನಾಥ ಪತ್ತಾರ, ಸಚಿನ ಕಂಗಳೆಕರ I. F. ನಾಯ್ಕರ, M. M. ಡಂಬಳ, ಸರಸ್ವತಿ ಮೆಹರವಾಡೆ, ಸಂಗೀತಾ ಜಡಿ, ಅಕ್ಕಮ್ಮ ಕಂಬಳಿ, ಪಾರ್ವತಿ ಹಿರೇಮಠ, ಶಿವಕುಮಾರ ಹಿರೇಮಠ, ಪ್ರಕಾಶ ಜಿಗಳೂರ, ಅಕ್ಕಮಹಾದೇವಿ ಅಂದೇಲಿಮಠ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಚಂದ್ರಶೇಖರ ಗಾಣಿಗೇರ, ಅನಿತಾ ಜಡಿ ಇವರಿಂದ ಭಜನೆ ಕಾರ್ಯಕ್ರಮ ಜರಗಿತು.

ಪ್ರಾರಂಭದಲ್ಲಿ ಗಾಯತ್ರಿ ನೆಲ್ಲಿಕೋಪ್ಪ ಸ್ವಾಗತಿಸಿದರು ಕೊನೆಗೆ C.G. ಧಾರವಾಡಶೆಟ್ಟರ್ ವಂದಿಸಿದರು.

ಭಾವಿಯನ್ನು ಸ್ವಚ್ಛಗೊಳಿಸಿ ಹಳೆಯ ನೀರನ್ನು ತೆಗೆದು ಹೊಸ ನೀರನ್ನು ತುಂಬಲಾಯಿತು.

WhatsApp Group Join Now
Telegram Group Join Now
Share This Article
error: Content is protected !!