Ad imageAd image

ಎಸ್ ಎಸ್ ಎಲ್ ಸಿ ಮುಂದೇನು? ಇಲ್ಲಿದೆ ಹತ್ತು ಹಲವು ಕೋರ್ಸ್‌ಗಳ ಸಂಪೂರ್ಣ ಮಾಹಿತಿ

Hubballi Dhwani
ಎಸ್ ಎಸ್ ಎಲ್ ಸಿ ಮುಂದೇನು? ಇಲ್ಲಿದೆ ಹತ್ತು ಹಲವು ಕೋರ್ಸ್‌ಗಳ ಸಂಪೂರ್ಣ ಮಾಹಿತಿ
WhatsApp Group Join Now
Telegram Group Join Now

ಎಸ್ ಎಸ್ ಎಲ್ ಸಿ ಮುಂದೇನು? ಇಲ್ಲಿದೆ ಹತ್ತು ಹಲವು ಕೋರ್ಸ್‌ಗಳ ಸಂಪೂರ್ಣ ಮಾಹಿತಿ

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎನ್ನುವ ಚಿಂತೆ ಎಲ್ಲರಲ್ಲೂ ಸಾಮಾನ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಫಲಿತಾಂಶದ ನಂತರ ಈ ಚಿಂತೆ ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ಆಸಕ್ತಿ ವಿಶಿಷ್ಟವಾದದ್ದು, ಒಬ್ಬರು ಇದ್ದಂತೆ ಮತ್ತೊಬ್ಬರಿಲ್ಲ. ಎಲ್ಲರ ಆಸಕ್ತಿಯಂತೆ ಕೋರ್ಸ್ ಆಯ್ಕೆಗೆ ನಾವು ಒಂದಿಷ್ಟು ಮಾಹಿತಿ ನೀಡಿದ್ದೇವೆ. ನೀವು ಸಾಧನೆ ಮಾಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ.
ಎಸ್‌ಎಸ್‌ಎಲ್ಸಿ ನಂತರ ವಿದ್ಯಾರ್ಥಿಗಳು ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ಆರ್ಥಿಕತೆಯ ಅನುಗುಣವಾಗಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಕೆಳಗಿನ ಲೇಖನದಲ್ಲಿ ಹಲವು ಕೋರ್ಸ್ಗಳ ಮಾಹಿತಿಯನ್ನು ನೀಡಲಾಗಿದೆ.
ಎಸ್‌ಎಸ್‌ಎಲ್ಸಿ ಉತ್ತೀರ್ಣರಾದ ನಂತರ ವಿದ್ಯಾರ್ಥಿಗಳು ತಾವು ಯಾವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯದಲ್ಲಿ ವೃತ್ತಿಯ ಆಯ್ಕೆಗೆ ಅನುಕೂಲ ಆಗುತ್ತದೆ. ಇಲ್ಲಿ ಮಾಡುವ ಕೋರ್ಸ್‌ಗಳ ಆಯ್ಕೆ ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಗುರಿಗೆ ಸಜ್ಜಾಗಲು ನೆರವಾಗುತ್ತದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ಆರ್ಥಿಕತೆಯ ಅನುಗುಣವಾಗಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಕೆಳಗೆ ಎಸ್‌ಎಸ್‌ಎಲ್ಸಿ ನಂತರ ಯಾವೆಲ್ಲಾ ಕೋರ್ಸ್ಗಳನ್ನು ಆಯ್ಕೆ ಮಾಡಬಹುದಾದ ಕೋರ್ಸ್ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಪಿಯುಸಿ (ಪದವಿ ಪೂರ್ವ ಶಿಕ್ಷಣ )
ಎಸ್ಎಸ್ಎಲ್ಸಿ ನಂತರ ಎಲ್ಲರು ಮೊದಲು ಸಜೆಸ್ಟ್ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್ನಲ್ಲಿ ಅಧ್ಯಯನ ಮಾಡಬಹುದಾಗಿದೆ.

ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್
ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್ ಅನ್ನು ಎಸ್ಎಸ್ಎಲ್ಸಿ ಅಥವಾ ಹತ್ತನೇ ತರಗತಿ ನಂತರ ಅಥವಾ ಪಿಯುಸಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಬಹುದು. ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಈ ಕೋರ್ಸ್ ನಂತರ ಉತ್ತಮ ಉದ್ಯೋಗವಕಾಶಕಗಳು ಇವೆ.

ಕರ್ನಾಟಕದಲ್ಲಿ ಎಂಟು ಹೊಸ ಡಿಪ್ಲೊಮ ಕೋರ್ಸ್ಗಳಿವೆ. ಈ ಕೋರ್ಸ್ಗಳನ್ನು ಎಸ್ಎಸ್ಎಲ್ಸಿ ನಂತರ ಅಧ್ಯಯನ ಮಾಡಬಹುದು.
ಆಟೊಮೇಷನ್ ಮತ್ತು ರೊಬೊಟಿಕ್ಸ್ (Automation and Robotics)
ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ (Cloud Computing and Big Data)
ಫುಡ್ ಪ್ರೊಸೆಸಿಂಗ್ ಮತ್ತು ಪ್ರಿಸರ್ವೇಷನ್ (Food processing and preservation)
ಪ್ರವಾಸೋದ್ಯಮ (Travel and Tourism).
ಸೈಬರ್ ಭದ್ರತೆ (Cyber security).
ನಿರ್ದೇಶನ ಮತ್ತು ಚಿತ್ರಕತೆ ರಚನೆ, ಟಿವಿ ಕಾರ್ಯಕ್ರಮಗಳ ನಿರ್ಮಾಣ (Direction Screen Play Writing and TV Production).
ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security).
ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ (Alternative Energy Technology).PC-Pexels.comBest Courses After
ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್)
ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಕೋರ್ಸ್ ಅನ್ನು ಎಸ್ಎಸ್ಎಲ್ಸಿ ಅಥವಾ 10ನೇ ತರಗತಿ ನಂತರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಎರಡು ವರ್ಷದ ಕೋರ್ಸ್ ಆಗಿದ್ದು ಈ ಕೋರ್ಸ್ ನಂತರ ಉನ್ನತ ವ್ಯಾಸಂಗವನ್ನು ಮುಂದುವರೆಸಬಹುದು. ಅನೇಕ ಡಿಪ್ಲೊಮ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕೋರ್ಸ್ನ ನಂತರ ಖಾಸಗಿ ಕೈಗಾರಿಕಾ ಕಂಪನಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅಧಿನದ ಇಲಾಖೆಗಳು ಹಾಗೂ ಕೆಲವು ಸಚಿವಾಲಯಗಳಲ್ಲಿ ಉದ್ಯೋಗ ಅವಕಾಶ ಇದೆ.

ಅಲ್ಪಾವಧಿಯ ಕೋರ್ಸ್ಗಳು
ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್.
ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗಳು.
ಡಿಜಿಟಲ್ ಮಾರ್ಕೆಟಿಂಗ್.
ಡಿಪ್ಲೊಮ ಇನ್ 2ಡಿ ಮತ್ತು 3ಡಿ ಎನಿಮೇಷನ್.
ಪ್ರೋಗ್ರಾಮಿಂಗ್ ಲಾಂಗ್ವೆಜ್ ಸರ್ಟಿಫಿಕೇಟ್ ಕೋರ್ಸ್ಗಳು.

ಅರೆವೈದ್ಯಕೀಯ ಕೋರ್ಸ್ಗಳು
ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
ಡಿಪ್ಲೊಮ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
ಡಿಪ್ಲೊಮ ಇನ್ ಹೆಲ್ತ್ ಇನ್ಸ್ಪೆಕ್ಟರ್.
ಡಿಪ್ಲೊಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ.
ಹೀಗೆ ಹಲವು ಅಲ್ಪಾವಧಿಯ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ.

WhatsApp Group Join Now
Telegram Group Join Now
Share This Article
error: Content is protected !!