Ad imageAd image

ಯುವಕ ಅನುಮಾನಸ್ಪದ ಸಾವು; ಕೊಲೆಯ ಶಂಕೆ

Hubballi Dhwani
ಯುವಕ ಅನುಮಾನಸ್ಪದ ಸಾವು; ಕೊಲೆಯ ಶಂಕೆ
WhatsApp Group Join Now
Telegram Group Join Now

ಯುವಕ ಅನುಮಾನಸ್ಪದ ಸಾವು; ಕೊಲೆಯ ಶಂಕೆ

ಹುಬ್ಬಳ್ಳಿ; ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನ ಮೃತದೇಹವು ಇಲ್ಲಿಯ ಲೋಹಿಯಾ ನಗರ ‘ದಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಮದ್ಯದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ಹೊರಬರಬೇಕಿದೆ. ‎‫

ಆಕಾಶ ಮಠಪತಿ (30) ಯುವಕನ ಮೃತ ದೇಹವು ಇಲ್ಲಿನ ಲೋಹಿಯಾನಗರದಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಯಾರೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಕಿಮ್ಸ್‌ಗೆ ರವಾನಿಸಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕುಟುಂಬ ದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹು-ಧಾ ಪೊಲೀಸ್‌ ಆಯುಕ್ತ ರೇಣುಕಾ ಸುಕುಮಾರ, ಡಿಸಿಪಿ ಕುಶಲ್ ಚೌಕ್ಸೆ, ಪಿಐ ಸುರೇಶ ಭೇಟಿ ನೀಡಿ ಮಾಹಿತಿ‌ ಕಲೆ ಹಾಕಿದ್ದಾರೆ.

ಈಗಾಗಲೇ ಮೃತ ಆಕಾಶನ ತಂದೆ ಶಂಕಿತ 6 ಜನರ ವಿರುದ್ಧ ದೂರು ನೀಡಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಮೃತನ ಹಣೆಯ ಮೇಲೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಮತ್ತಷ್ಟು ತನಿಖೆ ಚುರುಕುಗೊಳಿಸಲಾಗುವುದು ಎಂದು ಹು- ಧಾ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯ ನಂತರ ನನ್ನ ಮಗನ ಫೋನ್ ಸ್ವಿಚ್ ಆಫ್ ಆಗಿತ್ತು. ಕತ್ತಲಲ್ಲಿ ಕರೆದುಕೊಂಡು ಹೋಗಿ ಅವನನ್ನು ಹತ್ಯೆ ಮಾಡಿದ್ದಾರೆ. ಅವನ ಹಣೆಗೆ ಕಚ್ಚು ಬಿದ್ದಿದೆ. ಸಂಶಯಾಸ್ಪದ ವ್ಯಕ್ತಿಗಳ ಕುರಿತು ಪೊಲೀಸರ ಮುಂದೆ ಹೆಸರು ಹೇಳಿದ್ದೇವೆ ಎಂದು ಮೃತರ ತಾಯಿ ಅನ್ನಪೂರ್ಣ ಮಠಪತಿ ಹೇಳಿದ್ದಾರೆ.

ನನ್ನ ಮಗನನ್ನು ಮದ್ಯ ಕುಡಿಸಿ ಹತ್ಯೆ ಮಾಡಿರಬಹುದು ಎಂದು ಶಂಕಿಸಿರುವ ಆಕಾಶ ತಂದೆ ಶೇಖರಯ್ಯ ಮಠಪತಿ, ಶಂಕಿತ 6 ಜನರ ವಿರುದ್ಧ ದೂರು ನೀಡಿದ್ದಾರೆ. ದೂರು ಪಡೆದಿರುವ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!