ಸೆ.28ರಂದು ಪ್ರತಿಭಾವಂತ ಪುರಸ್ಕಾರ
ಹುಬ್ಬಳ್ಳಿ : ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಿನ ಘಟಕ ದಿ.28 ಶನಿವಾರ ಸಂಜೆ 5 ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಯಕ್ರಮದ ಸಮಿತಿ ಅಧ್ಯಕ್ಷ ಬಸವರಾಜ ಯಕಲಾಸಪೂರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದ ಅವರು. ಈ ಸಮಾರಂಭವು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯ ಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟಿದ ಉದ್ಘಾಟಿಸುವರು ತಾಲೂಕು ಘಟಕದ ಅಧ್ಯಕ್ಷ ಆನಂದ ಉಪ್ಪಿನ ಹಾಗೂ ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಬಸವರಾಜ ಯಕಲಾಸಪೂರ ಇವರುಗಳು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿ.ಆರ್.
ಎಲ್ ಸಂಸ್ಥೆ ಚೇರಮನ್ ವಿಜಯ ಸಂಕೇಶ್ವರ ಆಗಮಿಸುವರು ಮತ್ತು ಅತಿಥಿಗಳಾಗಿ ಎಸ್.ವಿ. ಅಂಗಡಿ, ವಿಜಯಕುಮಾರ ಶೆಟ್ಟರ, ವಿಜಯಕುಮಾರ ಬಿಸನಳ್ಳಿ, ಮಲ್ಲಿಕಾರ್ಜುನ ಸಾವಕಾರ, ಈರಣ್ಣ ಮಳಗಿ, ವಿರೇಂದ್ರ ಕೌಜಲಗಿ, ರಾಜಣ್ಣ ಬತ್ತಿ, ಶಿವಾ ಸಂಕೇಶ್ವರ, ಪ್ರಕಾಶ ಸಾಂಬ್ರಾಣಿ, ಸಿದ್ದಣ್ಣ ಕೆಸರಪ್ಪನವರ, ಶೇಖರ ಕವಳಿ ಆಗಮಿಸುವರು/ ಈ ಸಂದರ್ಭದಲ್ಲಿ ಸಾಧಕರಾದ ಸುಧಾ ಹಾದಿಮನಿ(ಶೀಲವಂತರ), ಗುರುಪ್ರಸಾದ ಅಂಗಡಿ, ಡಾ.ಈಶ್ವರ ಹಸಬಿ, ಚನ್ನವೀರ ಮುಂಗರವಾಡಿ, ಶಿದ್ದಲಿಂಗಪ್ಪ ಹುಬ್ಬಳ್ಳಿ, ಗುರುಪಾದೇಶ ಹುಬ್ಬಳ್ಳಿ, ಕುಮಾರಿ ಬಾಗೇವಾಡಿ ಇವರನ್ನು ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಆನಂದ ಉಪ್ಪಿನ, ಶಿವಣ್ಣ ಅಂಗಡಿ, ಬಸವರಾಜ ಯಕಲಾಸಪೂರ, ಚನ್ನಬಸಪ್ಪ ಧಾರವಾಡಶೆಟ್ಟರ, ಅಜ್ಜಪ್ಪ ಬೆಂಡಿಗೇರಿ, ಸಿದ್ದು ಅಂಕಲಕೋಟಿ, ವಿರೂಪಾಕ್ಷ ಬಿಸರಳ್ಳಿ, ಎಸ್.ಎ.ಲಕ್ಷ್ಮೀಶ್ವರ, ಅಶೋಕ ಹೊಸಕೇರಿ, ಡಾ.ವಿರೇಶ ಹಂಡಗಿ ಇತರರಿದ್ದರು.