ಸಸಿ ನೆಟ್ಟ ದೈವಜ್ಞ ಬ್ರಾಹ್ಮಣ ಸಮಾಜ
ಹುಬ್ಬಳ್ಳಿ: ಕೇಶ್ವಾಪುರದ ಬನಶಂಕರಿ ಲೇಔಟ್ನಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜದ ನೂತನ ಶಾಲಾ ಕಟ್ಟಡದ ಆವರಣದಲ್ಲಿ
ದೈವಜ್ಞ ಬ್ರಾಹ್ಮಣ ಯುವಕ ಸಂಘ ವತಿಯಿಂದ ಸಸಿ ನೆಡುವ (ವೃಕ್ಷಾರೋಪಣ) ಕಾರ್ಯಕ್ರಮ ನಡೆಯಿತು.
ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಜಯ ವೆರ್ಣೇಕರ್ ಹಾಗೂ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವಿವೇಕ ಅಣವೇಕರ ಗಿಡ ನೆಡುವ ಮುಖಾಂತರ ವೃಕ್ಷಾರೋಪಣಕ್ಕೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಕರ್ಕಿಮಠಕ್ಕೆ ಸೇವೆಸಲ್ಲಿಸಲು ಕಾಣಿಕೆ ಡಬ್ಬಿಯನ್ನು ಯುವಕ ಸಂಘದ ಪದಾಕಾರಿಗಳಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಯುವಕ ಸಂಘದ ಉದಯ್ ವೆರ್ಣೇಕರ್,ಸಂಜೀವ್ ಪುತಲೆಕರ್,ಮಾರುತಿ ರೇವಣಕರ್,ಮಂಜುನಾಥ್ ಸಾಮನೆಕರ್,ಸಂತೋಷ್ ವೆರ್ಣೇಕರ್ , ಪುನೀತ ಶೆಟ್,ಸಚಿನ್ ಗಾಂವಕರ,ಗಿರೀಶ್ ರೇವಣಕರ್ ,ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಭಟ್,ಸಂದೀಪ ಅಣವೇಕರ್ ಕುಂದನ್ ವೆರ್ಣೇಕರ್ ಮತ್ತು ವಿದ್ಯಾವರ್ಧಕ ಸಂಘದ ಉದಯ್ ರೇವಣ ಕರ್ ,ವಿನೋದ್ ರೇವಣಕರ,ಗುರುನಾಥ್ ವೆರ್ಣೇಕರ್,ರಾಜೇಶ್ ಗಾಂವಕರ ಹಾಗು ಸಮಾಜದ ಗಣ್ಯ ಡಾಕ್ಟರ ಗಣೇಶ್ ವೆರ್ಣೇಕರ್, ಮ್ಯಾನೇಜರ್ ವೆಂಕಟೇಶ್ ರಾಯ್ಕರ್ ಉಪಸ್ಥಿತರಿದ್ದರು.