ವಿಎಕೆ ಪೌಂಢೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆಗೆ ಸನ್ಮಾನ
ಹುಬ್ಬಳ್ಳಿ; ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಪ್ರಯುಕ್ತ ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿವಿಎಕೆ ಪೌಂಢೇಷನ್ ಸಂಸ್ಥಾಪಕ ವೆಂಕಟೇಶ್ ಕಾಟವೆ ಹಾಗೂ ಪ್ರಕಾಶ ಬುರಬುರೆ ಅವರು ಮೂರುಸಾವಿರ ಮಠ ಜಗದ್ಗುರು ರಾಜಯೋಗಿಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.
ನಂತರ ವೀರಶೈವ ಲಿಂಗಾಯತ ಸಮಿತಿ ವತಿಯಿಂದ ನಡೆದ ಬೃಹತ ಬೈಕ್ ರ‍್ಯಾಲಿಗೆ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಸಂಕಲ್ಪ್ ಶೆಟ್ಟರ,ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ ಕಟ್ಟಿ,ವೀರೇಶ್ ಸಂಗಳದ,ಚೆನ್ನಬಸಪ್ಪ ಧಾರವಾಡಕರ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.