ನವದೆಹಲಿ : ಪರ್ಸಿವೆರೆನ್ಸ್ ಮಾರ್ಸ್ ರೋವರ್ ಮಿಷನ್ ಇದೇ ಮೊದಲ ಬಾರಿಗೆ ಮಂಗಳ ಗ್ರಹದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿ ಶಿಲಾ ಸಂಯೋಜನೆಯ ನೈಜ-ಸಮಯದ ವಿಶ್ಲೇಷಣೆ ಮಾಡಿದೆ ನಾಸಾದ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ವಿಶ್ಲೇಷಣೆಯ ಆಧಾರದ ಮೇಲೆ ಅದು ಸ್ವತಃ ತಾನೇ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಬಾಹ್ಯ ಸಹಾಯವಿಲ್ಲದೆ ಸ್ವತಃ ತಾನಾಗಿಯೇ ಮಂಗಳ ಗ್ರಹದ ಬಂಡೆಗಳೊಳಗಿನ ಖನಿಜಗಳನ್ನು ಗುರುತಿಸಲು ರೋವರ್ ಮಿಷನ್ ಸುಮಾರು ಮೂರು ವರ್ಷಗಳಿಂದ ಎಐ ಅನ್ನು ಬಳಸುತ್ತಿದೆ. ಆದರೆ ಬಂಡೆಯ ಸಂಯೋಜನೆಯ ಬಗ್ಗೆ ನೈಜ ಸಮಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ರೋವರ್ ಮಿಷನ್ ಮಂಗಳ ಗ್ರಹದಲ್ಲಿ ಎಐ ತಂತ್ರಜ್ಞಾನ ಬಳಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ