ಜನರ ನೀರಿನ ದಾಹ ತಣಿಸುತ್ತಿರುವ ವಿಎಕೆ ಪೌಂಢೇಷನ
ಹುಬ್ಬಳ್ಳಿ: ನಗರದಲ್ಲಿ ಜನರ ಬಿಸಿಲ ಬೇಗೆ ತಣಿಸಲು VAK ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ ಅವರು ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಮುಂಭಾಗದಲ್ಲಿ ಕುಡಿಯುವ ನೀರನ್ನು
ಸಂಗ್ರಹಿಸುವ ಹೊಸ ಮಣ್ಣಿನ ಮಡಕೆಯನ್ನು ಇಡುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ. ಬಾಯಾರಿ ಬಂದ ಜನರು ಹಿಡಿದು ಕುಡಿಯಲು ಲೋಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ಬಿಸಿಲು ಹೆಚ್ಚು ಇರುವುದರಿಂದ ಕೆಲಸಕ್ಕಾಗಿ ಬಂದ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುತ್ತಾರೆ.ಆ ಜನರ ದಾಹ ಹೇಳತೀರದು. ಹೋಟೆಲಗಳಲ್ಲಿ ತಿಂಡಿ, ಟೀ, ಕಾಫಿ
ತಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಜನರ
ಸಂಕಷ್ಟವನ್ನು ಅರ್ಥ ಮಾಡಿಕೊಂಡು VAK ಫೌಂಡೇಶನ್
ವತಿಯಿಂದ ಶುದ್ದವಾದ ತಂಪಾದ ಕುಡಿಯುವ ನೀರನ್ನು
ವರ್ಷದಲ್ಲಿ 3 ರಿಂದ 4 ತಿಂಗಳು ನಿರಂತರವಾಗಿ ವಿತರಿಸುವ
ಸಂಕಲ್ಪವನ್ನು ಮಾಡಿದ್ದೇವೆ ಎಂದು ವೆಂಕಟೇಶ್ ಕಾಟವೆ
ಅವರು ಹೇಳಿದರು.
ಸಮಾಜದ ಪ್ರಮುಖರು ಮಾತನಾಡಿ,
ವೆಂಕಟೇಶ್ ಕಾಟವೆ ಅವರ ಕಾರ್ಯ ಶ್ಲಾಘನಿಯ, ಇಂತಹ
ಪುಣ್ಯ ಕಾರ್ಯಕ್ಕೆ ನಾವು ಸದಾ ಬೆನ್ನೆಲಬಾಗಿ ನಿಂತು
ಸಹಕಾರ ನೀಡುತ್ತೇವೆ ಎಂದು ಸಂತಸ
ವ್ಯಕ್ತಪಡಿಸಿದರು
ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಪ್ರತಿದಿನ ನೂರಾರು ಜನರು ನೀರು ಕುಡಿದು ಸಂತೋಷದಿಂದ ಹೋಗುತ್ತಾರೆ.
ದಾಹ ತೀರಿಸಿಕೊಳ್ಳಲು ತೊಂದರೆಯಾಗುತ್ತಿತ್ತು. ಆದರೆ
VAK ಫೌಂಡೇಶನ್ ವತಿಯಿಂದ ಕುಡಿಯುವ ನೀರಿನ
ಅರವಟಿಗೆ ತೆರೆದು ತುಂಬಾ ಒಳ್ಳೆಯ ಕೆಲಸ ಮಾಡಿದೆ.
ಇನ್ನುಳಿದ ನಗರದ ಪ್ರಮುಖ ರಸ್ತೆಗಳಲ್ಲಿ ಅರವಟಿಗೆ ತೆರೆದು ನೀರು ವಿತರಣೆ ಮಾಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರು ಅಶೋಕ್ ಕಾಟವೆ. ಎಸ್ ಎಸ್ ಕೆ ಬ್ಯಾಂಕಿನ ಚೇರ್ಮನರು ವಿಠ್ಠಲ ಲದವಾ. ಹಾಗೂ ಮಾಜಿ ಹು ಡಾ ಅಧ್ಯಕ್ಷರು ನಾಗೇಶ ಕಲಬುರ್ಗಿ.ಮಾಜಿ ಮಹಾಪೌರಾರು ಡಿ ಕೆ.ಚವ್ಹಾಣ. ಅವರು ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮಂಜುನಾಥ ಕಾಟಕರ. ಬಿ ಜೆ ಪಿ ಮುಖಂಡರು ರಂಗಾ ಬದ್ದಿ .ಭಾಸ್ಕರ ಜಿತೂರಿ.ನಾರಾಯಣ ಜರತಾರ್ಘರ.ಪ್ರಕಾಶ ಬುರಬುರೆ .ಮಿಥುನ ಚವ್ಹಾಣ. ರಾಜು ಜರತಾರ್ಘರ .ಪ್ರವೀಣ ಪವಾರ .ಪ್ರವೀಣ ಕುಬಸದ .ಗೋಪಾಲ ಕಲ್ಲೂರ .ಪ್ರಕಾಶ ಸಣ್ಣಕ್ಕಿ. ವಿನಾಯಕ ಕಾಟವೆ .ಸುನೀಲ ಕಾಟವೆ .ಸಚಿನ ಕಾಟವೆ .ಪ್ರವೀಣ್ ಹಬೀಬ .ನಾರಾಯಣ ಹಬೀಬ .ದೀಪಕ್ ಜಿತೂರಿ .ಸಚಿನ ಪೂಜಾರಿ .ಮಂಜುನಾಥ ಉಟ್ವಾಲೆ .ಅಮೃತ ಪವಾರ .ಆನಂದ ಬಾಕಳೆ .ವಿನಾಯಕ ಮೆಹರವಾಡೆ .ಸೋಮು ಕಲ್ಬುರ್ಗಿ .ಅನಿಲ ಚವ್ಹಾಣ .ಕುಶಾಲ ಪವಾರ .ಪ್ರತಿಭಾ ಪವಾರ .ಶೋಭಾ ನಾಕೋಡ .ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.