ಸಂಗೋಳ್ಳಿ ರಾಯಣ್ಣ ಜಯಂತಿ
ಚಕ್ಕಡಿ ಮೆರವಣಿಗೆಯಲ್ಲಿ ವೆಂಕಟೇಶ ಕಾಟವೆ ಭಾಗಿ
ಕರುನಾಡಿನ ರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಚಕ್ಕಡಿ ಬಂಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರ ರಾಣಿ ಕಿತ್ತೂರ ಚೆನ್ನಮ್ಮ ಅವರ ಭಾವಚಿತ್ರದೊಂದಿಗೆ ಗೋಕುಲನಿಂದ ಬೈಕ್ ರ‍್ಯಾಲಿ ಮುಖಾಂತರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಬಿಜೆಪಿ ಯುವ ಮುಖಂಡ (ವಿಎಕೆ) ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ ಅವರು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಕಾಟವೆ ಅವರು ಮಾತನಾಡಿ,
ಭಾರತ ಮಾತೆಯ ಹೆಮ್ಮೆಯ ಪುತ್ರ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಕೂಡ ಆಗಸ್ಟ್ ೧೫ರಂದು. ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದರು.
ನೀವು ನನ್ನನು ಗಲ್ಲಿಗೇರಿಸಬಹುದು ಆದರೆ, ನೆನಪಿರಲಿ, ನಮಗೆ ಸ್ವಾತಂತ್ರ ಬರುವವರಿಗೂ ಈ ದೇಶದ ಪ್ರತಿಯೊಂದು ಮನೆಯಿಂದಲೂ ಒಬ್ಬ ರಾಯಣ್ಣ ಹುಟ್ಟುತ್ತಾನೆ ಎಂದು ರಾಯಣ್ಣ ಬ್ರಿಟಿಷರಿಗೆ ತಮ್ಮ ಕೊನೆಯ ಮಾತಿನ ಮೂಲಕ ಎಚ್ಚರಿಕೆ ಕೊಟ್ಟಿದ್ದರು ಎಂದು ಹೇಳಿದರು.
ಶಿವಪ್ಪ ಹ ಹುಲಕೊಪ್ಪ, ಸೋಮಶೇಖರ್ ಮಾ ಪೂಜಾರ , ಮಂಜುನಾಥ ಶೇ ಹೂಗಾರ , ಶಿವು ಪಾಟೀಲ, ಸಚಿನ ಕಾಟವೆ, ಅಮಿತ್ ಇರಕಲ್, ಲಕ್ಷ್ಮಣ ಟೋಪೋಜಿ, ಮಂಜುನಾಥ ಛಾ ಪಾಟೀಲ, ಆನಂದ ಬಾಕಳೆ, ಪ್ರಕಾಶ ಟೋಪೋಜಿ, ಸುನಿಲ್ ಕಾಟವೆ, ಆಕಾಶ್ ರಂಗ್ರೆಜ್ ಮತ್ತಿತರರು ಉಪಸ್ಥಿತರಿದ್ದರು.