ಹುಬ್ಬಳ್ಳಿ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಜ್ಞಾವಂತ ನಾಗರಿಕರು ಮತ್ತು ಸಮಾಜದ ವೃತ್ತಿ ಪರರು ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವ್ರತ್ತದಿಂದ ಕೊಪ್ಪಿಕರ್ ರಸ್ತೆಯ, ದುರ್ಗದಬೈಲ, ದಾಜಿಬಾನಪೆಟದಿಂದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೆ ಪಾದಯಾತ್ರೆ ಮುಖಾಂತರ ಮೇ 7 ರ ಲೋಕ ಸಭಾ ಚುನಾವಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ದೇಶದ ಬಗ್ಗೆ ಅತಿ ಹೆಚ್ಚು ಚರ್ಚೆ ಮಾಡುವಂತಹ ಮತ್ತು ಸಲಹೆಗಳನ್ನು ಕೊಡುವಂತಹ ವಿದ್ಯಾವಂತರು ಮತ್ತು ವೃತ್ತಿಪರರು ಚುನಾವಣೆಗಳು ಬಂದಾಗ ಮತದಾನ ಮಾಡದೆ ಪ್ರವಾಸಕ್ಕೆ ಹೋಗುತ್ತಾರೆ. ವಿದ್ಯಾವಂತರು ಹೆಚ್ಚಿಗೆ ಇರುವಂತ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಪ್ರತಿ ಚುನಾವಣೆಯಲ್ಲಿ 52% ಹೆಚ್ಚಿಗೆ ಮತದಾನ ವಾಗುವುದಿಲ್ಲ.
ಮುಂಬರುವ ದಿನಗಳಲ್ಲಿ ಸರ್ಕಾರವು ಮತದಾನದಿಂದ ದೂರ ಇರುವವರ ಮೇಲೆ ಕ್ರಮವನ್ನು ಕೈಗೊಳ್ಳುವಂತಹ ಕಾನೂನು ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಂದು ಮತದ ಮಹತ್ವವನ್ನು ಅರಿತಂತಹ ವಿದೇಶದಲ್ಲಿದ್ದ ಭಾರತೀಯ ಸಮುದಾಯದ ಸಾವಿರಾರು ಜನರು ಮತದಾನ ಮಾಡಲು ಸ್ಕರಕ್ಕೆ ಭಾರತ ಕ್ಕೆ ಬಂದಿದ್ದ ಉದಾಹರಣೆಗಳು ಸಾಕಷ್ಟು ಇವೆ.
ಸಮಾಜದ ಹಿರಿಯ ವೈದ್ಯರು, ಇಂಜನಿಯರ ಗಳು, ಯುವಕರು ಮತ್ತು ಮಹಿಳಾ ಮಂಡಲ ದ ಜೊತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ವಿಜಯ ವೇರ್ಣೇಕರ್ ರಾಜನ ಅಣವೇಕರ್, ಉದಯ ರೇವಣಕರ, ಡಾ, ಗಣೇಶ್ ವೆರ್ಣೇಕರ್, ಡಾ. ಅನಂತ ರೇವಣಕರ, ಡಾ. ಅಶೋಕ್ ರೇವಣಕರ್, ಮಹಿಳಾ ಮಂಡಳದ ಅಧ್ಯಕ್ಷೆ ಶೈಲಾ ಶೆಟ್, ಪ್ರೇಮಾ ಭಟ್ ರಶ್ಮಿ ಅಣವೇಕರ್ , ಮನೋಜ್ ರಾಯಕರ್, ಮಾರುತಿ ವೇರ್ಣೇಕರ್ ,ಕೊಲ್ವೇಕರ್ ವಕೀಲರು, ವಸಂತ ಪಾಲನಕರ, ಸಂತೋಷ, ತೇಜಸ್ ವೆರ್ಣೇಕರ್ ಅಶೋಕ್ ಭಟ್ ಸೇರಿದಂತೆ ವಿವಿಧ ವೃತ್ತಿಪರರು ಭಾಗವಹಿಸಿದ್ದರು.