ಮತದಾನ ಮಾಡಿ, ಐಸ್ ಕ್ರೀಮ್ ತಿನ್ನಿ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ
ಹುಬ್ಬಳ್ಳಿಯ ಡೆರಿಸ್ ಐಸ್ ಕ್ರೀಮ್ ವತಿಯಿಂದ ನಡೆದ ಮತದಾನ ಮಾಡಿ, ಐಸ್ ಕ್ರೀಂ ತಿನ್ನಿ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
ಮತದಾನ ಮಾಡಿದ ಬಹುತೇಕರು ಅಕ್ಷಯ ಕಾಲೋನಿ ಹಾಗೂ ಕೇಶ್ವಾಪುರದಲ್ಲಿದ್ದ ಡೆರಿಸ್ ಮಳಿಗೆಗೆ ಬಂದು ಐಸ್ ಕ್ರೀಮ್ ಸವಿದರು.
ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಮಾಡಿ ಶಾಹಿ ತೋರಿಸಿದವರಿಗೆ ಫ್ರೀ ಐಸ್ ಕ್ರೀಂ ನೀಡುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ.
ಗ್ರಾಮೀಣ ಭಾಗಕ್ಕಿಂತ ಪ್ರಜ್ಞಾವಂತರು ನೆಲೆಸಿರುವ ನಗರಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿವೆ. ಮೊದಲ ಹಂತವಾಗಿ ಬೆಂಗಳೂರು ಉತ್ತರ ಹಾಗು ಗ್ರಾಮೀಣ ಲೋಕಸಭಾ ಚುನಾವಣೆ ಮತದಾನವೇ ಇದಕ್ಕೆ ಸಾಕ್ಷಿ. ಇದೇ ನಿರಾಸಕ್ತಿ ಹುಬ್ಬಳ್ಳಿಯಲ್ಲಿ ಕಾಣದಿರಲಿ ಎಂಬ ಕಾರಣಕ್ಕೆ ಮತದಾನ ಖಚಿತ, ಐಸ್ ಕ್ರೀಂ ಉಚಿತ ಎಂಬ ಅಭಿಯಾನಕ್ಕೆ ನಗರದ ಜನತೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡೈರಿಸ್ ಐಸ್ ಕ್ರೀಮ್‌ನ ಅಕ್ಷಯ ದಾನಕಶಿರೂರ ಹಾಗೂ ಅಕ್ಷಯ ಸರಾಫ ಇಂತಹ ವಿನೂತನ ಪ್ರಯತ್ನಕ್ಕೆ ಜೈ ಎಂದಿದ್ದಾರೆ.
ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿ ಹಾಗೂ ಕೇಶ್ವಾಪುರದಲ್ಲಿನ ಡೈರಿಸ್ ಐಸ್ ಕ್ರೀಮ್ ಮಳಿಗೆಯಲ್ಲಿ ಮೇ 7 ರಂದು ಬೆಳಿಗ್ಗೆ 11 ಗಂಟೆಗೆಯಿಂದ ರಾತ್ರಿ 11 ಗಂಟೆವರೆಗೂ ಐಸ್ ಕ್ರೀಂ ವಿತರಿಸಲಾಯಿತು. ಮತದಾನ ಮಾಡಿ ಬಂದ ಪ್ರಜೆಗಳು ಶಾಹಿ ತೋರಿಸಿದರೆ ಉಚಿತವಾಗಿ ನೀಡಲಾಯಿತು.
7200 ಜನರು ಒಟ್ಟು 6.5 ಲಕ್ಷ ಮೌಲ್ಯದ ಐಸಕ್ರೀಮ್ ಸವಿದಿದ್ದಾರೆ ಎಂದು ಅಕ್ಷಯ ದಾನಕಶಿರೂರ ತಿಳಿಸಿದ್ದಾರೆ.
ಇದೇ ಮೊದಲಲ್ಲ;
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಿ ಬಂದವರು ಒಂದು ಐಸ್ ಕ್ರೀಮ್ ಖರೀದಿ ಮಾಡಿದರೆ, ಮತ್ತೊಂದು ಐಸ್ ಕ್ರೀಮ್ ಉಚಿತವಾಗಿ ನೀಡಿದ್ದಾರೆ. ಅಂದಾಜು 50 ಸಾವಿರ ಮೌಲ್ಯದ ಐಸ್ ಕ್ರೀಂ ಉಚಿತವಾಗಿ ನೀಡುವ ಮೂಲಕ ಮತದಾನ ಹೆಚ್ಚಳಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಮತದಾನ ಹೆಚ್ಚಳಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿರುವ ಡೆರಿಸ್ ಐಸ್ ಕ್ರೀಮ್ ನ ಅಕ್ಷಯಕುಮಾರ್ ದಾನಕಶಿರೂರು ಹಾಗೂ ಅಕ್ಷಯ ಸರಾಫ ಅವರಿಗೆ ಹುಬ್ಬಳ್ಳಿ ಧ್ವನಿ ದಿನಪತ್ರಿಕೆ ಹಾಗೂ ಸುದ್ದಿವಾಹಿನಿ ಕಡೆಯಿಂದ ಜನತೆ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ.
ಸರ್ಕಾರ ಹಾಗೂ ಸಂಘ ಮತ್ತು ಸಂಸ್ಥೆಗಳು ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವವರನ್ನು ಗುರುತಿಸಬೇಕು ಎಂಬುವುದು ಹುಬ್ಬಳ್ಳಿ ಧ್ವನಿಯ ಒತ್ತಾಯವಾಗಿದೆ.