Ad imageAd image

ಐದು ತಿಂಗಳಲ್ಲಿ 13 ಕೊಲೆ, 12 ಪೋಕ್ಸೊ ಪ್ರಕರಣ ; ಕಮಿಷನರ್ ಬದಲಾವಣೆಗೆ ಹೆಚ್ಚಿದ ಒತ್ತಡ

Hubballi Dhwani
ಐದು ತಿಂಗಳಲ್ಲಿ 13 ಕೊಲೆ, 12 ಪೋಕ್ಸೊ ಪ್ರಕರಣ ; ಕಮಿಷನರ್ ಬದಲಾವಣೆಗೆ ಹೆಚ್ಚಿದ ಒತ್ತಡ
WhatsApp Group Join Now
Telegram Group Join Now

ಐದು ತಿಂಗಳಲ್ಲಿ 13 ಕೊಲೆ, 12 ಪೋಕ್ಸೊ ಪ್ರಕರಣ
ಕಮಿಷನರ್ ಬದಲಾವಣೆಗೆ ಹೆಚ್ಚಿದ ಒತ್ತಡ

ಹುಬ್ಬಳ್ಳಿ: ಕಳೆದ ಐದು ತಿಂಗಳ ಅವಧಿಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 13 ಮಂದಿ ಕೊಲೆಯಾಗಿದ್ದಾರೆ. 12 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ನಡೆದು, ತಿಂಗಳಾಗುವಷ್ಟರಲ್ಲಿ ವೀರಾಪುರ ಓಣಿಯಲ್ಲಿ ಮತ್ತೊಂದು ಯುವತಿ ಅಂಜಲಿ ಕೊಲೆಯಾಗಿದ್ದಾಳೆ. ಹೆಣ್ಣು ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸುವುದು ಹೇಗೆ ಎನ್ನುವ ಭಯದ ಜೊತೆಗೆ, ಮನೆಯಲ್ಲೂ ಭದ್ರತೆಯಿಲ್ಲ ಎನ್ನವ ವಾತಾವರಣ ಸೃಷ್ಟಿಯಾಗಿದೆ.

ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಅವರನ್ನು ನಗರದ ಹೋಟೆಲೊಂ ದರಲ್ಲಿ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ನೇಹಾ ಮತ್ತು ಅಂಜಲಿ ಕೊಲೆಗಳು ನಡೆದಿವೆ. ಆರೋಪಿಗಳಿಗೆ ಶೀಘ್ರವಾಗಿ ಕಠಿಣ ಶಿಕ್ಷೆ ವಿಧಿಸಿದರೆ, ಅಂತಹ ಕೃತ್ಯ ಎಸಗಬೇಕೆನ್ನುವವರಿಗೆ ಭಯ ಉಂಟಾಗುತ್ತದೆ. ಇದಕ್ಕೆ ಕಾನೂನು ಗಟ್ಟಿಯಾಗಲೇಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

ಕಮಿಷನರ್ ಬದಲಾಗುವ ಸಾಧ್ಯತೆ;
ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನ‌ರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ ಇಲ್ಲಿನ ಸ್ವಪಕ್ಷಿಯರು ಹಾಗೂ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದರು.

ಈ ನಿಟ್ಟಿನಲ್ಲಿ ಇದು ಗೃಹ ಇಲಾಖೆಗೆ ಮುಜುಗರವಾದ ಹಿನ್ನೆಲೆಯಲ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಬಲ್ಲ ಮೂಲದಿಂದ ತಿಳಿದು ಬಂದಿದೆ.

ಮಂಗಳೂರು ಕಮಿಷನರೇಟ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ 2007ನೇ ಬ್ಯಾಚಿನ್ IPS ಎನ್‌ ಶಶಿಕುಮಾ‌ರ್ ಅವರನ್ನು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ನೇಮಕ ಮಾಡುವ ಸಿದ್ಧತೆ ನಡೆದಿದೆ.

ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿ-ಧಾರವಾಡ ಕಮಿಷರೇಟ್‌ನನ್ನು IG ಗ್ರೇಡ್ ಮಾಡಲಾಗಿತ್ತು. ಹೀಗಾಗಿ ಇಲ್ಲಿಗೆ ಬರುವ ಅಧಿಕಾರಿಗಳು ಡೈರೆಕ್ಟ್ IPS ಅಧಿಕಾರಿಗಳನ್ನೇ ನೇಮಕ ಮಾಡಬೇಕಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಬಂದ ನಂತರದಲ್ಲಿ IG ಗ್ರೇಡ್ ನಲ್ಲಿದ್ದ ಕಮಿಷನರೇಟ್ ನನ್ನು D ಗ್ರೇಡ್ ಮಾಡಿ KSPS ಪ್ರಮೋಟೆಡ್ ಅಧಿಕಾರಿಗಳು ಕೂಡ ಕಮೀಷನ‌ರ್ ಹುದ್ದೆ ನಿರ್ವಹಿಸುವ ಅವಕಾಶ ಮಾಡಲಾಗಿತ್ತು.

ಹೀಗಾಗಿ ಪ್ರಮೋಟೆಡ್ ಅಧಿಕಾರಿಗಳಿಂದ ಇಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ವಿಫಲರಾದ ಕಾರಣ ಡೈರೆಕ್ಟ್ IPS ಗಳನ್ನು ನೇಮಕ ಮಾಡಿ ಇಲ್ಲಿನ ಕಾನೂನು ಸುವ್ಯವಸ್ಥೆ ಕಂಟ್ರೋಲ್ ತರಲು ಹೋಮ್ ಮಿನಿಸ್ಟರ್ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

WhatsApp Group Join Now
Telegram Group Join Now
Share This Article
error: Content is protected !!