Ad imageAd image

78ನೇ ಸ್ವಾತಂತ್ರ್ಯೋತ್ಸವ 18 ರಾಷ್ಟ್ರಗಳ ಕಾಯಿನ್‌ಗಳಿಂದ ಭಾರತ ಚಿತ್ರ ಅನಾವರಣ !

Hubballi Dhwani
78ನೇ ಸ್ವಾತಂತ್ರ್ಯೋತ್ಸವ 18 ರಾಷ್ಟ್ರಗಳ ಕಾಯಿನ್‌ಗಳಿಂದ ಭಾರತ ಚಿತ್ರ ಅನಾವರಣ !
WhatsApp Group Join Now
Telegram Group Join Now

ಕಲಘಟಗಿ: ಕಲಾವಿದ ಸುನೀಲ ಕಮ್ಮಾರ ಅವರು 18 ರಾಷ್ಟ್ರಗಳ ಹಳೆಯ ನೋಟು ಹಾಗೂ ನಾಣ್ಯಗಳಿಂದ ರಚಿಸಿದ ಭಾರತ ನಕ್ಷೆ ಎಲ್ಲರ ಗಮನ ಸೆಳೆಯಿತು.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಗಂಡು ಮಕ್ಕಳ ಶಾಲೆಯಲ್ಲಿ ಹಳೆಯ ನಾಣ್ಯ ಹಾಗೂ ನೋಟುಗಳನ್ನು ಬಳಸಿ ಸುಂದರವಾದ ಭಾರತ ನಕ್ಷೆಯನ್ನು ರಚಿಸಿದ್ದರು. ಇದನ್ನು ನೋಡಲು ಪಟ್ಟಣವಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದ ಜನತೆ ಆಗಮಿಸಿದ್ದರು.
ತಹಶೀಲ್ದಾರ್ ವಿರೇಶ ಮುಳಗುಂದ ಮಠ, ಬಿಇಒ ಉಮಾದೇವಿ ಬಸಾಪುರ, ತಾಲೂಕು ಆರೋಗ್ಯ ಆಡಳಿತ ಅಕಾರಿ ಕರ್ಲವಾಡ, ಸಿಡಿಪಿಒ, ಕಾರ್ಮಿಕ ಇಲಾಖೆ ಅಕಾರಿ ಲತಾ, ಮುಖ್ಯೋಪಾಧ್ಯಪಕ ವೈ.ಜಿ.ಭಗವತಿ, ಆರ್.ಎಂ.ಹುಲ್ತಕೊಟಿ, ಪತ್ರಕರ್ತ ಪ್ರಭಾಕರ ನಾಯ್ಕ , ಶ್ರೀಧರ ಪಾಟೀಲ ಕುಲಕರ್ಣಿ , ಮಲ್ಲಯ್ಯ ಗುಡಿಮನಿ, ಮಂಜುನಾಥ ಮಾಳಗಿ ಸೇರಿದಂತೆ ಮತ್ತಿತರರು ನಕ್ಷೆ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೃತ್ತಿಯಲ್ಲಿ ವಾಹನಗಳ ಪಂಕ್ಚರ್ ತೆಗೆಯುವ ಸುನೀಲ ಕಮ್ಮಾರ ಅವರು ಹಳೆಯ ನಾಣ್ಯ ಹಾಗೂ ನೋಟು ಸಂಗ್ರಹಿಸುವ ಹವ್ಯಾಸವನ್ನು ಕಳೆದ 20 ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದಾರೆ.
ಸುಮಾರು ೧೮ ರಾಷ್ಟ್ರಗಳ ಪುರಾತನ ಕಾಲದ ನಾಣ್ಯ ಹಾಗೂ ನೋಟುಗಳನ್ನ ಸಂಗ್ರಹಿಸಿ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ನಾಣ್ಯಗಳನ್ನು ಜಿಲ್ಲೆಯಾದ್ಯಂತ ಇರುವ ಶಾಲಾ ಕಾಲೇಜುಗಳಿಗೆ ಪ್ರತಿ ತಿಂಗಳು ಯಾವುದೇ ಪ್ರತಿಫಲಾಪೇಕ್ಷೆ ಹೊಂದದೆ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದಾರೆ.
ವಿಜಯನಗರ ಸಾಮ್ರಾಜ್ಯ, ಚೋಳ ಹಾಗೂ ಚಾಲುಕ್ಯರ ಕಾಲದ ನಾಣ್ಯ, ಮೈಸೂರು ರಾಜರ ಕಾಲದ ನಾಣ್ಯ, ರಾಮ, ಲಕ್ಷ್ಮಣ ಸೀತೆ, ಆಂಜನೇಯ, ರಾಣಾ ಪ್ರತಾಪ, ನೆಹರು, ಗಾಂಜಿ, ನಿಸರ್ಗ, ಟಿಪ್ಪು ಸುಲ್ತಾನ್, ಚಾಮುಂಡಿ, ರಾಷ್ಟ್ರ ಪ್ರಾಣಿ, ಪಕ್ಷಿ, ರಿಸರ್ವ್ ಬ್ಯಾಂಕ್ ಹೀಗೆ ಹತ್ತು ಹಲವು ಪುರಾತನ ಕಾಲವನ್ನು ಪರಿಚಯಿಸುವ ಬೆಳ್ಳಿ, ತಾಮ್ರ, ಹಿತ್ತಾಳೆ, ನಿಕ್ಕೆಲ್, ಅಲ್ಯುಮಿನಿಯಂ, ನಾಣ್ಯಗಳು ಇವರಲ್ಲಿವೆ.
ವಿವಿಧ ದೇಶದ ನಾಣ್ಯಗಳು : ಭಾರತ, ಅರಬ್, ಬ್ರಿಟನ್, ಅಮೆರಿಕ, ಇಂಡೋನೇಷಿಯಾ, ಜಪಾನ್, ನೇಪಾಳ, ಬಾಂಗ್ಲಾದೇಶ, ರಷ್ಯಾ ಹಾಗೂ ವಿಯೇಟ್ನಾಂನಲ್ಲಿ ರೂಪಾಯಿ, ಫೌಂಡ್, ಪೇಂಟ್ಸ್, ಡಾಲರ್, ಧಮಡಿ, ಧರೆಮ್ಸ್, ಕಿಟನ್ ಡಾಲರ್, ಹಾಲ್ಸ್, ರಿಯಾಲ್ ಹೀಗೆ ಹತ್ತಾರು ದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.
ನಾಡಿನಾದ್ಯಂತ ಪುರಾತನ ಕಾಲದ ನಾಣ್ಯಗಳು ಹಾಗೂ ದೇವಸ್ಥಾನಗಳನ್ನು ಪರಿಚಯಿಸುವವರು ಇಂದಿಗೂ ತೆರೆಮರೆಯಲ್ಲೇ ಉಳಿದಿದ್ದಾರೆ. ಅಂಥವರನ್ನು ಸರ್ಕಾರ ಪ್ರೋತ್ಸಾಹಿಸಿದಲ್ಲಿ ಜಗತ್ತಿಗೆ ಮಾದರಿಯಾಗುವಂತೆ ಸೇವಾ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಹಾಗೆಯೇ ನನಗೆ ಸರ್ಕಾರದಿಂದ ಸಹಕಾರ ಬಂದಲ್ಲಿ ನಾಡಿನಾದ್ಯಂತ ನಾಣ್ಯ ಪ್ರದರ್ಶನ ಕಾರ್ಯವನ್ನು ಮಾಡುತ್ತೇನೆ ಎಂದು ಸುನೀಲ್ ಕಮ್ಮಾರ ಅಭಿಪ್ರಾಯ ಪಟ್ಟಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!