Ad imageAd image

ಬೆಟ್ಟಿಂಗ್ ಚಟ: ಕೋಟ್ಯಂತರ ಆಸ್ತಿ ಮಾರಿದ ಮಗ ರಾಡ್‌ನಿಂದ ಮಗನನ್ನೇ ಕೊಂದ ತಂದೆ

Hubballi Dhwani
ಬೆಟ್ಟಿಂಗ್ ಚಟ: ಕೋಟ್ಯಂತರ ಆಸ್ತಿ ಮಾರಿದ ಮಗ  ರಾಡ್‌ನಿಂದ ಮಗನನ್ನೇ ಕೊಂದ ತಂದೆ
WhatsApp Group Join Now
Telegram Group Join Now

ಬೆಟ್ಟಿಂಗ್ ಚಟ: ಕೋಟ್ಯಂತರ ಆಸ್ತಿ ಮಾರಿದ ಮಗ
ರಾಡ್‌ನಿಂದ ಮಗನನ್ನೇ ಕೊಂದ ತಂದೆ

ಹೈದರಾಬಾದ; ಹಳ್ಳಿಯಿಂದ ಹಿಡಿದೂ ದಿಲ್ಲಿಯವರೆಗೂ ಬೆಟ್ಟಿಂಗ ಭೂತ ಎಲ್ಲ ಕ್ಷೇತ್ರವನ್ನು ವ್ಯಾಪಿಗೊಂಡಿದೆ. ಸಣ್ಣ ಮಕ್ಕಳಯಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಬೆಟ್ಟಿಂಗ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಐಪಿಎಲ್ ಆರಂಭದಿಂದ ಅಂತ್ಯದವರೆಗೂ ಪ್ರತಿ ಪಂದ್ಯಕ್ಕೂ ಲಕ್ಷಾಂತರ ಹಣ ಬಾಜಿ ಕಟ್ಟಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಗ್ರಾಮೀಣ ಭಾಗದಿಂದ ಹಿಡಿದು ನಗರದವರೆಗೂ ನಡೆಯುತ್ತಿರುವ ಬೆಟ್ಟಿಂಗನಿಂದಾಗಿ ಇಂದು ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಬೆಟ್ಟಿಂಗನಿಂದ ಕೆಲವರು ಲಾಭವನ್ನು ಪಡೆದುಕೊಂಡಿದ್ದು, ಈ ಕುತಂತ್ರಗಳಿಗೆ ಬಲಿಯಾದ ಅಮಾಯಕರ ಜೇಬು ಲೂಟಿ ಮಾಡುತ್ತಿದ್ದಾರೆ.
ಜೂಜಿನ ಚಟಕ್ಕೆ ಬಿದ್ದಿರುವ ಜನರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಂತ್ರಸ್ತ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ನೊಂದ ಕೆಲವರು ಆತ್ಮಹತ್ಯೆಗೆ ಶರಣಾಗಿ ಅರ್ಧದಲ್ಲೇ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಿದ್ದಾರೆ. ಇನ್ನು ಕೆಲವು ಘಟನೆಗಳಲ್ಲಿ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಕ್ಕಳಿಗೆ ಪಾಲಕರು ಛೀಮಾರಿ ಹಾಕುತ್ತಿದ್ದಾರೆ. ಈ ಕ್ರಮದಲ್ಲಿ ಎಷ್ಟು ಹೇಳಿದರೂ ಕೇಳದ ಕಾರಣ ಕ್ಷಣ ಮಾತ್ರದಲ್ಲಿ ಪ್ರಾಣ ತೆಗೆಯುವ ಘಟನೆಗಳೂ ನಡೆಯುತ್ತಿವೆ. ಇಂತಹದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬೆಟ್ಟಿಂಗ್ ದಂದೆಗೆ ಸಿಲುಕಿ ಕೋಟಿ ಕೋಟಿ ಹಣ ಕಳೆದುಕೊಂಡ ಯುವಕನನ್ನ ತಂದೆಯೇ ಕೊಂದಿದ್ದಾರೆ.
ಇತ್ತೀಚೆಗೆ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಗನಿಗೆ ತಂದೆ ಥಳಿಸಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿನ್ನಶಂಕರಂಪೇಟೆ ತಾಲೂಕಿನ ಭಗೀರಥಪಲ್ಲಿ ಮೂಲದ ಮುಖೇಶ್ ಕುಮಾರ್ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋಜಿಗಾಗಿ ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಸುಮಾರು ೨ ಕೋಟಿ ರೂ.ವರೆಗೂ ಹಣ ಕಳೆದುಕೊಂಡಿದ್ದಾರೆ.
ಇದನ್ನು ಕಂಡ ತಂದೆ ಸತ್ಯನಾರಾಯಣ, ಮುಖೇಶ್ ಕುಮಾರ್ ಅವರನ್ನು ಆನ್ಲೈನ್ ಗೇಮ್ ಆಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಮಾತು ಕೇಳಿರಲಿಲ್ಲ. ಈ ಪ್ರಕ್ರಿಯೆಯಿಂದ ಬೇಸತ್ತ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಮುಖೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತರು ಚೇಗುಂಟಾ ತಾಲೂಕಿನ ಮಲ್ಯಾಲದಲ್ಲಿ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಂದೆ-ಮಗನ ನಡುವಿನ ಜಗಳಕ್ಕೆ ಆನ್ಲೈನ್ ಬೆಟ್ಟಿಂಗ್ ಕಾರಣವಾಗಿದ್ದು, ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಬೆಟ್ಟಿಂಗ್ನಿಂದಾಗಿ ಮುಖೇಶ್ ಕುಮಾರ್ ಅವರ ಮೇಡ್ಚಲ್ನಲ್ಲಿರುವ ಮನೆಗಳು ಮತ್ತು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!