ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು
ಹಂದಿ ಕಿಡ್ನಿ ಮಾಡಿಸಿಕೊಂಡು ವಿಶ್ವದ ಗಮನ ಸೆಳೆದಿದ್ದ ವ್ಯಕ್ತಿ
ಸಾವನ್ನಪ್ಪಿದ್ದಾನೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರೋಗಿಗೆ 2 ತಿಂಗಳ ಹಿಂದೆಯಷ್ಟೇ 4 ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಲಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಆದ ಎರಡು ತಿಂಗಳ ಬಳಿಕ ರೋಗಿ ಸಾವನ್ನಪ್ಪಿರುವುದು ವರದಿಯಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು. ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅಂದರೆ ಮೇ 11ರಂದು ಅವರು ಸಾವಿಗೀಡಾಗಿರುವುದಾಗಿ ಕುಟುಂಬಸ್ಥರು ಫೋಷಿಸಿರುವುದು ವರದಿಯಾಗಿದೆ.