Ad imageAd image

2025ಕ್ಕೆ ವಿಶ್ವದ ಮೊದಲ ಏರ ಟ್ಯಾಕ್ಸಿ ಎಲ್ಲಿ? ಹೇಗಿದೆ ಸಿದ್ಧತೆ? ಕುತೂಲಕ್ಕೆ ಇಲ್ಲಿದೆ ಉತ್ತರ

Hubballi Dhwani
2025ಕ್ಕೆ ವಿಶ್ವದ ಮೊದಲ ಏರ ಟ್ಯಾಕ್ಸಿ ಎಲ್ಲಿ? ಹೇಗಿದೆ ಸಿದ್ಧತೆ? ಕುತೂಲಕ್ಕೆ ಇಲ್ಲಿದೆ ಉತ್ತರ
WhatsApp Group Join Now
Telegram Group Join Now

2025ಕ್ಕೆ ವಿಶ್ವದ ಮೊದಲ ಏರ ಟ್ಯಾಕ್ಸಿ
ಎಲ್ಲಿ? ಹೇಗಿದೆ ಸಿದ್ಧತೆ? ಕುತೂಲಕ್ಕೆ ಇಲ್ಲಿದೆ ಉತ್ತರ

ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಾಹನ ದಟ್ಟಣೆಯೂ ಹೆಚ್ಚುತ್ತಲಿದೆ. ಇದಕ್ಕಾಗಿಯೇ ಇದಕ್ಕಾಗಿಯೇ ರಸ್ತೆ ವಿಸ್ತಾರ, ಮೇಲ್ಸೇತುವೆ ಅಂತಹ ಎಲ್ಲ ಪ್ರಯತ್ನಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಇಲ್ಲೊಂದು ದೇಶ ಇದ್ಯಾವ ಜಂಜಾಟಕ್ಕೂ ಒಳಗಾಗದೇ ಬೇರೆ ಮಾರ್ಗವನ್ನೇ ಹುಡುಕಲು ಮುಂದಾಗಿದೆ. ಅದ್ಯಾವ ಮಾರ್ಗ ಅಂತೀರಾ ಇಲ್ನೋಡಿ ನಿಮ್ಮ ಕುತೂಹಲಕ್ಕೆ ಉತ್ತರ ಸಿಗಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸದ್ಯೋಮಕ್ಕೆ ಹೆಸರುವಾಸಿಯಾಗಿರುವ ದುಬೈ ಇಂತಹದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಏರ ಟ್ಯಾಕ್ಸಿ ಮೊರೆ ಹೊಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ 2025ಕ್ಕೆ ಏರ ಟ್ಯಾಕ್ಸಿ ಹಾರಾಡಲಿದೆ. ಆ ಮೂಲಕ ಹೊಸ ಇತಿಹಾಸವೊಂದು ಸೃಷ್ಟಿಯಾಗಲಿದೆ. ಈ ಕುತೂಹಲದ ಕ್ಷಣಕ್ಕೆ ಜಗತ್ತಿನ ಎಲ್ಲ ದೇಶಗಳು ಎದುರು ನೋಡುತ್ತಲಿವೆ. ಒಮ್ಮೆ ಈ ತಂತ್ರಜ್ಞಾನ ಯಶಸ್ವಿಯಾದರೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಎದುರಾಗಿರುವ ಟ್ರಾಫಿಕ್‌ ಜಾಮ್‌ ಸಮಸ್ಯೆಗೆ ಕಡಿವಾಣ ಬಿಳಲಿದೆ.

ಅಮೆರಿಕಾ ಮೂಲದ ಜಾಬಿ ಏವಿಷೇಯನ್ ತನ್ನ ಸ್ವದೇಶಕ್ಕಿಂತ ಮೊದಲು ಅರಬ್ ರಾಷ್ಟ್ರದಲ್ಲಿ ಫ್ಲೈಯಿಂಗ್ ಟ್ಯಾಕ್ಸಿಯನ್ನು ಹಾರಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡುತ್ತಿದೆ. ಯೋಜನೆ ಜಾರಿಗೊಂಡರೆ ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ (Flying Taxi) ಸೇವೆ ಆರಂಭವಾದಂತಾಗುತ್ತದೆ.
ಗಲ್ಫ್ ಎಮಿರೇಟ್‌ನೊಂದಿಗೆ ಸಹಭಾಗಿತ್ವದಲ್ಲಿ ಏರ್ ಟ್ಯಾಕ್ಸಿಯ ಕೆಲಸವು ಇತರೆ ಕಾರ್ಯಗಳಿಂದ ಸ್ವಲ್ಪ ವೇಗವಾಗಿ ಮುಂದುವರಿದಿದೆ ಎಂದು ಜಾಬಿ ಏವಿಯೇಷನ್ ಕಾರ್ಯಾಚರಣೆಗಳ ಅಧ್ಯಕ್ಷ ಬೊನ್ನಿ ಸಿಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೊದಲು ನಾವು ದುಬೈನಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ದುಬೈನಲ್ಲಿ 2025 ರ ವೇಳೆಗೆ ಆರಂಭಿಕ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. 2026 ರ ಆರಂಭದಲ್ಲಿ ಎಲೆಕ್ಟ್ರಿಕ್ ಏರ್-ಟ್ಯಾಕ್ಸಿ ಸೇವೆಗಳು ಮತ್ತು ವಾಣಿಜ್ಯ ಸೇವೆಗಳನ್ನು ನಿರ್ವಹಿಸಲು ‘ಆರು ವರ್ಷಗಳ ವಿಶೇಷ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಈ ಮೈಲಿಗಲ್ಲನ್ನು ಈಗ 2025 ರ ಅಂತ್ಯದ ವೇಳೆಗೆ ತಲುಪಬಹುದು ಎಂದು ಬೊನ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫ್ಲೈಯಿಂಗ್ ಟ್ಯಾಕ್ಸಿ ಹಾರಾಟಕ್ಕೆ ಹೇಗಿದೆ ಸಿದ್ಧತೆಗಳು?
ಮಾನವ ನಿರ್ಮಿತ ದ್ವೀಪವಾದ ಪಾಮ್ ಜುಮೇರಾ, ಬುರ್ಜ್ ಖಲೀಫಾ ಗೋಪುರದ ಬಳಿಯ ದುಬೈ ಡೌನ್ಟೌನ್ ಮತ್ತು ನಗರದ ಮರೀನಾದಲ್ಲಿ ಉಡಾವಣಾ ತಾಣಗಳಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ತನ್ನ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗಾಗಿ ದುಬೈನಾದ್ಯಂತ ನಾಲ್ಕು ವರ್ಟಿಪೋರ್ಟ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. ಉಡಾವಣಾ ತಾಣಗಳಲ್ಲಿ ವಿಮಾನ ಪ್ರಯಾಣದ ಜಾಗತಿಕ ಕೇಂದ್ರವಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ.

ಪ್ರತಿಸ್ಪರ್ಧಿ ಆರ್ಚರ್ ಏವಿಯೇಷನ್ ಇಂಕ್ ಕಳೆದ ವರ್ಷ ಅಬುಧಾಬಿ ಸರ್ಕಾರದೊಂದಿಗೆ ಪ್ರಾಥಮಿಕ ಒಪ್ಪಂದವನ್ನು ಮಾಡಿಕೊಂಡಿದ್ದು, 2026 ರ ವೇಳೆಗೆ ಏರ್ ಟ್ಯಾಕ್ಸಿಗಳನ್ನು ಉತ್ಪಾದನೆ ಮತ್ತು ಉಡಾವಣೆಯನ್ನು ಗುರಿಯಾಗಿಸಿಕೊಂಡಿದೆ. ಜಾಬಿ ದುಬೈನೊಳಗಿನ ವಿಮಾನಗಳಿಗೆ ಪ್ರತ್ಯೇಕತೆಯನ್ನು ಹೊಂದಿದ್ದರೆ, ಆರ್ಚರ್ ಅಬುಧಾಬಿ ಮತ್ತು ದುಬೈ ನಡುವೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ವಿಮಾನಗಳನ್ನು ನಿರ್ವಹಿಸಲು ಯೋಜಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!