ವಾಣಿಜ್ಯ ಮಳಿಗಳಿಗೆ ನೀರು
ಮಳೆ ಬಂದರೆ ಹೆದರುವ ಹುಬ್ಬಳ್ಳಿ ಜನ
ಹುಬ್ಬಳ್ಳಿ; ನಗರದಲ್ಲಿ ಭಾನುವಾರ ಮತ್ತೆ ಮಳೆ ಸುರಿಯಲಾರಂಭಿಸಿದೆ. ಹೆಸರಿಗಷ್ಟೇ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿಯಾಗಿದೆ. ಮಳೆ ಬಂದರೆ ಸಾಕು ಜನ ಆತಂಕಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದಿಷ್ಟು ಮಳೆ ಜೋರಾಗಿ ಸುರಿದರೆ ಸಾಕು ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆ ಹಾಗೂ ವಾಣಿಜ್ಯ ಮಳಿಗೆಗಳ ಒಳಗೆ ನುಗ್ಗುತ್ತದೆ.
ಮಳೆ ಸುರಿದ ಸಂದರ್ಭದಲ್ಲಿ ಹುಬ್ಬಳ್ಳಿಯ ದಾಜಿಬಾನಪೇಟ, ಕಮರಿಪೇಟ, ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ಮೇದಾರ ಓಣಿ, ಹಳೇಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ಅಲ್ಲದೇ ಬೀದಿಬದಿ ವ್ಯಾಪಾರ, ವಾಣಿಜ್ಯ ಮಳಿಗೆಗಳಿಗೂ ಹಾನಿ ಮಾಡಿದೆ. ರಸ್ತೆಗಳೆಲ್ಲ ತುಂಬಿ ಹರಿದವು. ಇದರಿಂದ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ಒಂದೇ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತು ಜನರು ತೊಂದರೆ ಪಡುವಂತಾಗಿದೆ. ಸ್ಮಾರ್ಟ ಸಿಟಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು.