ಜಮ್ಶೆಡ್ಪುರ; ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದ ದಿಕ್ಕಿನಿಂದ ಏರಿದ ಭಾರತ ಮೂಲದ ಅತಿ ಕಿರಿಯ ಪರ್ವತಾರೋಹಿ ಎಂಬ ಹಿರಿಮೆಗೆ 16 ವರ್ಷ ವಯಸ್ಸಿನ ಕಾಮ್ಯಾ ಕಾರ್ತಿಕೇಯನ್ ಭಾಜನ ರಾಗಿದ್ದಾರೆ. ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್ (ಟಿಎಸ್ಎಎಫ್) ಈ ಕುರಿತು ಹೇಳಿಕೆ ನೀಡಿದೆ.
ಪರ್ವತಾರೋಹಣದ ಅವಧಿಯಲ್ಲಿ ಕಾಮ್ಯಾ ಅವರ ಜೊತೆಗೆ ಅವರ ತಂದೆ, ನೌಕಾಪಡೆಯ ಕಮಾಂಡರ್ ಎಸ್.ಕಾರ್ತಿಕೇಯನ್ ಅವರೂ ಇದ್ದರು.
ಮೌಂಟ್ ಎವರೆಸ್ಟ್ ಏರಿದ ವಿಶ್ವದ ಎರಡನೇ ಕಿರಿಯ, ಭಾರತ ಪ್ರಥಮ ಸಾಹಸಿಗ ಎಂಬ ಹಿರಿಮೆ ಕಾಮ್ಯಾದ್ದಾಗಿದೆ ಎಂದು ನೌಕಾಪಡೆಯ ಪಶ್ಚಿಮ ಕಮಾಂಡ್ ತಿಳಿಸಿದೆ.