ಭಾರತದಲ್ಲಿ ಗರಿಷ್ಠ ತಾಪಮಾನ
52.3 ಡಿಗ್ರಿ ಬಿಸಿಲಿನಲ್ಲಿ ಬೇಯುತ್ತಿರುವ ದೆಹಲಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಿರು ಬಿಸಿಲಿನ ಕುಲುಮೆಯಲ್ಲಿ ಬೇಯುತ್ತಿದೆ. ಭಾರತದ ಇತಿಹಾಸದಲ್ಲೇ ಅತ್ಯಧಿಕ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬುಧವಾರ ದೆಹಲಿ ಮಂಗೇಶ್‌ಪುರದಲ್ಲಿ ದಾಖಲಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಂಗಳವಾರವಷ್ಟೇ ನೈಋತ್ಯ ದೆಹಲಿಯಲ್ಲಿ 49.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಬಿಸಿಲ ಬೇಗೆಯಿಂದ ಜನರು ಪರದಾಡುವಂತಾಗಿದೆ. ಸಂಜೆ 4.14ರ ಹೊತ್ತಿಗೆ ಹವಾಮಾನ ಕೇಂದ್ರದಲ್ಲಿ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜಸ್ಥಾನದಿಂದ ಬಿಸಿ ಗಾಳಿ ಬೀಸುತ್ತಿರುವುದು ದೆಹಲಿಯ ಉಷ್ಣತೆ ಹೆಚ್ಚಾಗಲು ಕಾರಣವಾಗಿದೆ ಎಂದು ಐಎಂಡಿ ಹೇಳಿದೆ. ಇದರ ಜತೆಗೆ ಖಾಲಿ ಮೈದಾನಗಳಲ್ಲಿ ವಿಕಿರಣ ಹೆಚ್ಚಿರುವುದು ಕೂಡ ಬಿಸಿಲಿನ ಝಳ ಹೆಚ್ಚಾಗಿದೆ.