ಮೂರನೇ ಬಾರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಮಿತ್ತ ಕಲಘಟಗಿಯಲ್ಲಿ ಜನತೆಗೆ ಉಚಿತವಾಗಿ ಉಪಹಾರ ವಿತರಣೆ ಮಾಡಿ ಅಭಿಮಾನ ಮೆರೆದಿದ್ದಾರೆ.
ಸಾರ್ವಜನಿಕರಿಗೆ ದೀಪಕ್ ನಿಕ್ಕಮ್ ಅವರು ಇಡ್ಲಿ, ವಡಾ, ಪಲಾವ್, ಸಿಹಿ ತಿಂಡಿ ನೀಡಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಟೇಲ್ ಮಾಲೀಕರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರತಿ ಸಲ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಈ ಕುಟುಂಬ ಆಹಾರ ವಿತರಣೆ ಮಾಡುತ್ತಾ ಬಂದಿದೆ ನಿಕ್ಕಂ ಅವರ ಕುಟುಂಬದ ಕಾರ್ಯಕ್ಕೆ ಕಲಘಟಗಿ ಸೇರಿದಂತೆ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿಯವರ ಮೇಲಿನ ಅಭಿಮಾನದಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇದಕ್ಕೆ ನಿಕ್ಕಮ್ ಕುಟುಂಬದವರು ಮತ್ತು ಗೆಳೆಯರ ಬಳಗವು ಕೂಡ ಸಾಥ್ ನೀಡಿದ್ದಾರೆ.
ಕಲಘಟಗಿ ಪಟ್ಟಣದ ಮೋದಿ ಇಡ್ಲಿ ಸೆಂಟರ್ ಮಾಲೀಕರಾದ ದೀಪಕ್ ನಿಕ್ಕಮ್ ಅವರು ಪ್ರತಿ ಬಾರಿ ನರೇಂದ್ರ ಮೋದಿಜಿ ಅವರ ಪದಗ್ರಹಣ ಸಮಾರಂಭದ ಸಮಯದಲ್ಲಿ ಉಚಿತವಾಗಿ ಉಪಹಾರ ವಿತರಣೆ ಮಾಡುತ್ತ ಬಂದಿರುವ ನಿಕ್ಕಂ ಕುಟುಂಬದ ಕಾರ್ಯ ಶ್ಲಾಘನೀಯ ಎಂದು ಮಂಜುನಾಥ ಮುಳಗುಂದ ತಿಳಿಸಿದ್ದಾರೆ.