ಹುಬ್ಬಳ್ಳಿ: ಹಳೆಯ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊರ್ವನ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ.
ನೂಲ್ವಿ ಗ್ರಾಮದ ಚೇತನ ಕುಂಬಾರ ಹಲ್ಲೆಗೆ ಒಳಗಾದವನಾಗಿದ್ದು, ಈತನ ಮೇಲೆ ಅದೇ ಗ್ರಾಮದ ವಿರೇಶ, ಚಂದ್ರಗೌಡ, ನಾಗರಾಜ ಎಂಬಾತರು ಹಲ್ಲೆ ಮಾಡಿದಲ್ಲದೇ ಪೆಟ್ರೋಲ್ ಸುರಿದು ಬೈಕ್ ಸುಟ್ಟಿದ್ದಾರೆಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.