ಬಾಲ ಬಿಚ್ಚಿದ ಪುಡಿ ರೌಡಿಗಳು
ಗನ್ ತೋರಿಸಿ ಕೊಲೆಗೆ ಯತ್ನ
ಹುಬ್ಬಳ್ಳಿ: ಗನ್ ತೋರಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್ವಾರ್ಗೆ ನಡೆದಿದ್ಯಾ ತಯಾರಿ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕೊಲೆ ಸಂಚು ಆರೋಪದಡಿ ಹುಬ್ಬಳ್ಳಿಯ ಸುಂದರ್ ಪೌಲ್ & ಗ್ಯಾಂಗ್ ವಿರುದ್ಧ ಅಭಿಷೇಕ್ ಜಾಧವ್ ಎಂಬುವವರು ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿಯಾಗಿರುವ ಅಭಿಷೇಕ್ ಜಾಧವ್ ಅವರು ಸುಂದರ್ ಪೌಲ್, ಫಿಲೋಮಿನ್ ಪೌಲ್, ಚಂದ್ರ ಪೌಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಜೂನ್ 5ರ ತಡರಾತ್ರಿ ಸನಾದಿ ಅಪ್ಪಣ್ಣ ಸರ್ಕಲ್ ಬಳಿ 8 ಜನರ ಗ್ಯಾಂಗ್ ಗನ್ ತೋರಿಸಿ ಧಮ್ಕಿ ಹಾಕಿದ್ದರು. ಕಾರಲ್ಲಿ ಬಂದಿದ್ದ 8 ಜನರ ಗ್ಯಾಂಗ್ ಅಭಿಷೇಕ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಧಮ್ಕಿ ಹಾಕಿದ್ದರು. ಹುಬ್ಬಳ್ಳಿಗೆ ನಾವೇ ಡಾನ್ಗಳೆಂದು ಅಭಿಷೇಕ್ಗೆ ಬೆದರಿಸಿದ್ದರು. ನಮ್ಮ ಬಳಿ ಗನ್ಗಳಿವೆ, ನೀನು ಹೊರಗಡೆ ಓಡಾಡು ನೋಡ್ಕೋತೀವಿ ಎಂದು ಅಭಿಷೇಕ್ಗೆ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಅಭಿಷೇಕ್ ಜೂ.27ರಂದು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು.
ಸದ್ಯ ಅಭಿಷೇಕ್ ಜಾಧವ್ ದೂರಿನಡಿ IPC 1860, 109, 120B, 504, 506 ಹಾಗೂ 109ರ ಸೆಕ್ಷನ್ ಅಡಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಇತ್ತ ವಿದ್ಯಾನಗರ ಠಾಣೆಯಲ್ಲಿ ಅಭಿಷೇಕ್ ಜಾಧವ್ ಸೇರಿ ನಾಲ್ವರ ವಿರುದ್ಧವೂ ಕೇಸ್ ದಾಖಲಾಗಿದೆ. ಸುಂದರ್ ಪೌಲ್ ಎಂಬುವರ ದೂರಿನ ಅನ್ವಯ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.