ಚನ್ನಮ್ಮ ಮೈದಾನದಲ್ಲಿ ಪ್ರಸಾದ ವಿತರಣೆ
10 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿದ್ದ ವೆಂಕಟೇಶ ಕಾಟವೆ
ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ಮೈದಾನ (ಈದ್ದಾ)ದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರು ಹತ್ತು ಸಾವಿರ ಭಕ್ತರಿಗೆ ಸೋಮವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಈ ಬಾರಿ ಇಲ್ಲಿ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಪ್ರತಿ ಕ್ಷೇತ್ರದಲ್ಲಿ ಗುರು ಹಿರಿಯರ ಮಾರ್ಗದರ್ಶನ ಮತ್ತು ಯುವ ಮಿತ್ರರ ಸಹಯೋಗದಿಂದ ಸಮಾಜ ಸೇವೆ ಮಾಡಲು ನನಗೆ ಇನ್ನಷ್ಟು ಹುಮ್ಮಸ್ಸು ಬರುವಂತಾಗಿದೆ ಎಂದು ವೆಂಕಟೇಶ ಕಾಟವೆ ಹೇಳಿದರು.
ಪ್ರಸಾದ ವಿತರಣೆಗೆ ಶಾಸಕ ಮಹೇಶ ಟೆಂಗಿನಕಾಯಿ, ರಾಣಿ ಚನ್ನಮ್ಮ ಮೈದಾನ ಗಜಾನನ ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ ಚಾಲನೆ ನೀಡಿದರು. ಮೇಯರ್ ರಾಮಣ್ಣ ಬಡಿಗೇರ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಲಿಂಗರಾಜ ಪಾಟೀಲ, ತಿಪ್ಪಣ್ಣ ಮಜ್ಜಗಿ, ಡಾ.ವಿ ಎಸ್. ವಿ. ಪ್ರಸಾದ, ವಸಂತ ಹೊರಟ್ಟಿ, ನಾರಾಯಣ ಜರತಾರಘರ, ಶಿವು ಮೆಣಸಿನಕಾಯಿ, ಸೀಮಾ ಲದವಾ, ಪ್ರಕಾಶ ಬುರಬುರೆ, ವಿನಾಯಕ ಲದವಾ, ಪ್ರಕಾಶ ಶೃಂಗೇರಿ, ಪ್ರವೀಣ ಪವಾರ, ಸಿದ್ದು ಕಾಟವೆ, ಸಚಿನ ಕಾಟವೆ, ಅಮಿತ ಇರಕಲ್, ವಿಜಯ ಪವಾರ, ಸುನಿಲ ಕಾಟವೆ, ಸಂತೋಷ ಕಾಟವೆ, ಇತರರು ಇದ್ದರು.