ಹುಬ್ಬಳ್ಳಿಯಲ್ಲಿ 100ಕ್ಕೂ ಅಧಿಕ ಲ್ಯಾಪ್ ಟಾಪ್ ಕಳವು
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿ ಚೈತನ್ಯ ನಗರದ ಕಾರ್ಮಿಕ ಭವನ ಕಚೇರಿಯ ಕೊಠಡಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಇಟ್ಟಿದ್ದ 101 ಲ್ಯಾಪ್ಟಾಪ್ಗಳು ಕಳವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲೆಂದು ಮಂಜೂರಾಗಿದ್ದ 250 ಲ್ಯಾಪ್ ಟಾಪ್ಗಳನ್ನು ಇಲ್ಲಿನ ಕಾರ್ಮಿಕ ಭವನ ಕಚೇರಿಯ ಕೊಠಡಿಯಲ್ಲಿ ಇಡಲಾಗಿ- ತ್ತು. ಕಳ್ಳರು ಮೇ 22ರಿಂದ ಆ. 30ರೊಳಗೆ ಕೊಠಡಿಯ ಕಿಟಕಿ ತೆರೆದು ಎಚ್ಪಿ ಕಂಪನಿಯ 101 ಲ್ಯಾಪ್ಟಾಪ್ ಕಳವು ಮಾಡಿದ್ದಾರೆ. ಇದಕ್ಕೂ ಮೊದಲು ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್ ಹಾಗೂ ಡಿವಿಆರ್ ಕದ್ದಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ಶ್ವೇತಾ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.