ಪಿಕೆಪಿಎಸ್ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ; ಮಂಜಯ್ಯ ಅಣ್ಣಿಗೇರಿ
ಕಲಘಟಗಿ: ಸಾರ್ವಜನಿಕರ ಸಹಕಾರದಿಂದ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಬಮ್ಮಿಗಟ್ಟಿ ಗ್ರಾಮದ ಪಿಕೆಪಿಎಸ್‌ನ ಅಧ್ಯಕ್ಷ ಮಂಜಯ್ಯ ಅಣ್ಣಿಗೇರಿ ಹೇಳಿದರು.
ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲ್ಲಿ ಮಾತನಾಡಿದ ಅವರು,
ಬಮ್ಮಿಗಟ್ಟಿ ಗ್ರಾಮದ ಪಿಕೆಪಿಎಸ್ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಈಗಾಗಲೇ ಪಡಿತರ ಪೂರೈಕೆ ಜೊತೆಗೆ ಯೋಗ್ಯ ದರದಲ್ಲಿ ರೈತರಿಗೆ ಗೊಬ್ಬರ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯೋಗ್ಯ ದರದಲ್ಲಿ ತಾಡಪತ್ರಿ ವಿತರಣೆ ಮಾಡುವ ಕುರಿತು ಚಿಂತಿಸಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಲಮಾಣಿ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರಿಗೆ ಹೊಸ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾಲಕ್ಕೆ ಸಂಬಂಸಿದಂತೆ ಪತ್ತು ತಯಾರಿಸಿ ಸಲ್ಲಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಸಂಘಕ್ಕೆ ೨೫ ಸಾವಿರ ರೂಪಾಯಿ ಲಾಭವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಬಸಪ್ಪ ಚ ಮುತ್ತಗಿ, ಸದಸ್ಯರಾದ ಬಸಯ್ಯ ಅಣ್ಣಿಗೇರಿ, ಮಲ್ಲಪ್ಪ ತೋಳಲಿ, ಕಲ್ಲಪ್ಪ ಹುಲ್ಲಂಬಿ , ಮಲ್ಲಪ್ಪ ತೊಳಲಿ, ಭೀರಪ್ಪ ಯ ಕುರಬರ , ಮಂಜುನಾಥ ಯ ವಾಲಿಕಾರ, ಮಲ್ಲಪ್ಪ ಬ ಅರಳಿಕಟ್ಟೆ, ನೀಲವ್ವ ಬ ಇಂದೂರ, ಭೀಮಣವ್ವ ಲಮಾಣಿ, ಗ್ರಾಮಸ್ಥರಾದ ಬೆನಕಪ್ಪ ಡೊಣ್ಣಿ, ಪರಪ್ಪ ಜವಳಿ, ಶಿವಾನಂದ ಬೆಂಗೇರಿ, ಸಂಗಪ್ಪ ಖಂಡೂನವರ, ಮಹೇಶ ಲಕ್ಕಣ್ಣವರ, ಯಲ್ಲಪ್ಪ ಹಿಂಡಸಗೇರಿ, ಪುಟ್ಟಯ್ಯ ಕೋರಿ, ಚನ್ನಪ್ಪ ಕಂಠಿ ಸೇರಿದಂತೆ ಮತ್ತಿತರರು ಇದ್ದರು.